ವಿಶ್ವ ರಂಗಭೂಮಿ ದಿನಾಚರಣೆ 27ರಂದು

24 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಅಭಿನಯ ಭಾರತಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ ವತಿಯಿಂದ ಮಾ. 27ರಂದು ಬೆಳಗ್ಗೆ 10.30ಕ್ಕೆ ಕಸಾಪ ಭವನದಲ್ಲಿ ವಿಶ್ವ ರಂಗಭೂಮಿ ದಿನ, ಅಭಿನಯ ಭಾರತಿ ರಂಗ ಪ್ರಶಸ್ತಿ ಪ್ರದಾನ ಹಾಗೂ ದಿ. ಪಿ.ಆರ್​. ಮಳಗಿ ಸ್ಮರಣಾರ್ಥ ದತ್ತಿ ಉಪನ್ಯಾಸ ಏರ್ಪಡಿಸಲಾಗಿದೆ ಎಂದು ಅಭಿನಯ ಭಾರತಿ ಅಧ್ಯಕ್ಷ ಅರವಿಂದ ಕುಲಕರ್ಣಿ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸವದತ್ತಿಯ ರಂಗ ಆರಾಧನಾ ತಂಡದ ಮುಖ್ಯಸ್ಥ ಝಾಕಿರ್ ನದಾಫ್ ಪ್ರಶಸ್ತಿಗೆ ಭಾಜನರಾಗಿದ್ದು, ಉದ್ಯಮಿ ಡಾ. ವಿ.ಎಸ್​.ವಿ ಪ್ರಸಾದ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಹಿರಿಯ ಸಾಹಿತಿ ಡಾ. ಕೃಷ್ಣ ಕಟ್ಟಿ ಅವರು ಸಂಸ್ಕೃತ ನಾಟಕಗಳಲ್ಲಿ ರಾಜಕೀಯ ಪ್ರಜ್ಞೆ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದರು.

ಝಾಕಿರ್ ಡಿಪ್ಲೋಮಾ ಪದವಿ ಪಡೆದಿದ್ದರೂ ರಂಗಭೂಮಿ ಇವರ ಜೀವನದ ಉಸಿರಾಗಿದೆ. 35 ವರ್ಷದಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿದ್ದಾರೆ. ಸಂಗೀತದಲ್ಲೂ ಪರಿಣಿತಿ ಪಡೆದು ಕೆಲ ನಾಟಕಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಇವರಿಗೆ ಸರ್ಕಾರದಿಂದ ಯಾವುದೇ ಪ್ರಶಸ್ತಿ ಲಭಿಸಿಲ್ಲ. ಇಂತಹ ಜನರನ್ನೇ ಗುರುತಿಸಿ ನಾವು ಪ್ರಶಸ್ತಿ ನೀಡುತ್ತಿದ್ದೇವೆ ಎಂದರು.

ಸಮೀರ ಜೋಶಿ, ವಿನಾಯಕ ನಾಯಕ, ಜಯತೀರ್ಥ ಜಹಾಗೀರದಾರ, ವಿಶ್ವನಾಥ ಕೋಳಿವಾಡ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net