ವಿದ್ಯಾರ್ಥಿಗಳಿಂದ ಮಣ್ಣಿನ ಸಂರಕ್ಷಣೆ ಜಾಗೃತಿ

World Soil Day
World Soil Day
Published on

ಬೆಂಗಳೂರು ಗ್ರಾಮಾಂತರ: ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿಯ ದೊಡ್ಡರಾಯಪ್ಪನಹಳ್ಳಿಯಲ್ಲಿ ಬುಧವಾರ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿಯಲ್ಲಿ ವಿಶ್ವ ಮಣ್ಣಿನ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮಣ್ಣಿನ ರಕ್ಷಣೆ ಹಾಗೂ ಅದರ ಮಹತ್ವದ ಕುರಿತು ರೈತರಲ್ಲಿ ಜಾಗೃತಿ ಮೂಡಿಸಿದರು.
ಕೃಷಿ ವಿಶ್ವ ವಿದ್ಯಾಲಯ ಮತ್ತು ಅಂತಿಮ ವರ್ಷದ ಬಿಎಸ್‌ಸಿ, ಬಿ.ಟೆಕ್ ವಿದ್ಯಾರ್ಥಿಗಳು ಮಣ್ಣಿಗೆ ಪೂಜೆ ಅರ್ಪಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ವೇಳೆ ಮಣ್ಣು ಹಾಗು ಜಲ ಸಂರಕ್ಷಣೆ ಕುರಿತು ಕಿರುನಾಟಕ ಪ್ರದರ್ಶಿಸಿ ರೈತರಲ್ಲಿ ಜಾಗೃತಿ ಮೂಡಿಸಿದರು. ಬೆಂಗಳೂರು ಕೃಷಿ ಮಹಾವಿದ್ಯಾಲಯ, ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರ, ದೊಡ್ಡಬಳ್ಳಾಪುರ ಪಶುಪಾಲನೆ ಹಾಗೂ ಕೃಷಿ ವಿಶ್ವ ವಿದ್ಯಾಲಯ ಮತ್ತು ಅಂತಿಮ ವರ್ಷದ ಬಿಎಸ್‌ಸಿ, ಬಿ.ಟೆಕ್ ವಿದ್ಯಾರ್ಥಿಗಳ ಸಹಯೋಗದಲ್ಲಿ ವಿವಿಧ ಕೃಷಿ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಮಣ್ಣಿನ ತಜ್ಞ ಹಾಗೂ ವಿಜ್ಞಾನಿ ಡಾ. ಉಮೇಶ್ ಮಾತನಾಡಿ, ಮಣ್ಣಿನ ಮೌಲ್ಯ ಹಾಗೂ ಮಣ್ಣಿನ ಫಲವತ್ತತೆಯ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಿದರು. ಪ್ರಕ್ರಿತಿಯಲ್ಲಿ ಎಲ್ಲದಕ್ಕೂ ಮಣ್ಣೇ ಮೂಲ, ಮಣ್ಣಿನ ಸವಕಲಿ ತಪ್ಪಿಸಬೇಕು, ಲವತ್ತತೆ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.

ದೊಡ್ಡರಾಯಪ್ಪನಹಳ್ಳಿಯ ಪ್ರಗತಿಪರ ರೈತ ಚೊಕ್ಕರೆಡ್ಡಿ ಅವರು ಮಣ್ಣಿನ ಸಂರಕ್ಷಣೆಯಲ್ಲಿ ರೈತರ ಪಾತ್ರದ ಕುರಿತು ಕಿರು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net