ಬದುಕಿನ ಉದ್ದಕ್ಕೂ ಕುಟುಂಬಕ್ಕಾಗಿ ಜೀವಿಸಿ 60ರ ನಂತರದ ನಿವೃತ್ತಿ ಬದುಕನ್ನು ನಿಮಗಾಗಿ ಬದುಕಿ, ಯಾರಲ್ಲಿಯೂ ಯಾವುದೇ ನಿರೀಕ್ಷೆಯಿಲ್ಲದೆ ಆತ್ಮ ಗೌರವದಿಂದ ಜೀವನ ನಡೆಸುವ ಸಾಮರ್ಥ್ಯ ನಿಮ್ಮಲ್ಲಿದೆ ಎಂದು ಹಿರಿಯ ನಾಗರಿಕರನ್ನು ಉದ್ದೇಶಿಸಿ ಸ್ಫೂರ್ತಿದಾಯಕವಾದ ಮಾತುಗಳನ್ನು ಹೇಳಿದ ಸಿಇಒ, ಹಿರಿಯರಲ್ಲಿರುವಂತಹ ಶಕ್ತಿ, ಚೈತನ್ಯ, ಉತ್ಸಾಹ ಮತ್ತು ಜೀವನದ ಮೌಲ್ಯ ಅನೇಕರಿಗೆ ಪ್ರೇರಣೆ ನೀಡುವಂತಹದ್ದು, ಸಮಾಜದಲ್ಲಿ ಪ್ರತಿಯೊಬ್ಬರೂ ಹಿರಿಯರನ್ನು ಗೌರವಿಸುವುದು ಮತ್ತು ಅವರ ಹಿತ ವಚನಗಳನ್ನು ಪಾಲಿಸುವುದನ್ನು ಕಲಿಯಬೇಕು ಎಂದು ಸಮಾಜಕ್ಕೆ ಕರೆ ನೀಡಿದರು.