ಹಿರಿಯರಿಗೆ ಸಲ್ಲಲಿ ಸೂಕ್ತ ಗೌರವ: ಡಾ. ಕೆ.ವಿದ್ಯಾಕುಮಾರಿ

udp-2-hiriya
Published on


ಉಡುಪಿ: ನಮ್ಮ ಮನೆಯಲ್ಲಿರುವ ಹಾಗೂ ಸುತ್ತಮುತ್ತಲಿರುವ ಹಿರಿಯ ನಾಗರಿಕರನ್ನು ಎಲ್ಲರೂ ಗೌರವಿಸಲೇಬೇಕು. ಸಂಧ್ಯಾ ಕಾಲದಲ್ಲಿರುವ ಅವರಿಗೆ ಆಸ್ತಿ-ಸಂಪತ್ತು ಯಾವುದೂ ಬೇಡ. ಅವರಿಗೆ ಬೇಕಿರುವುದು ನಾಲ್ಕಾರು ಸಾಂತ್ವನದ ಮಾತು. ಜಿಲ್ಲೆಯ ಹಿರಿಯ ನಾಗರಿಕರು ಯಾವುದೇ ವಿಚಾರ&ವಿಷಯದಲ್ಲಿ ಭಯಗೊಳ್ಳುವುದು ಬೇಡ. ನಿಮ್ಮೊಂದಿಗೆ ನಾವಿದ್ದೇವೆ ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಅಭಯ ನೀಡಿದರು.

ಉಡುಪಿಲ್ಲಿ ಜಿಲ್ಲಾಡಳಿತ , ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಉಡುಪಿ ಜಿಲ್ಲೆ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಾಸಕ ಯಶ್​ಪಾಲ್​ ಸುವರ್ಣ, ಜಿಲ್ಲಾ ಕಾನೂನು ಸೇವಾ ಪ್ರ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಸಿವಿಲ್​ ನ್ಯಾಯಾಧೀಶೆ ಶರ್ಮಿಳಾ ಎಸ್​., ಕನ್ನಡ ಮತ್ತು ಸಂಸತಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಅಧಿಕಾರಿಗಳಾದ ಬಿ.ಎಚ್​.ಕೃಷ್ಣಪ್ಪ, ರಾಮದಾಸ್​ ಕೆ.ಜಿ., ವಕೀಲರ ಸಂದ ಅಧ್ಯಕ್ಷ ರೊನಾಲ್ಡ್​ ಪ್ರವಿಣಕುಮಾರ್​, ಡಾ. ಪಿ.ವಿ. ಭಂಡಾರಿ, ನಿರಂಜನ ಭಟ್​, ಸದಾನಂದ ಹೆಗಡೆ, ವಾಸುದೇವ ರಾವ್​, ಸರಳಾ ಕಾಂಚನ್​, ಸದಾನಂದ ಶೆಟ್ಟಿ ಇತರರು ಉಪಸ್ಥಿತರಿದ್ದರು. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಕಲಾ ನೃತ್ಯ ಸಂಸ್ಥೆಯ ವಿದ್ಯಾರ್ಥಿಗಳು ಭರತನಾಟ್ಯ ಹಾಗೂ ಗಾಯಕ ಗಣೇಶ ಗಂಗೊಳ್ಳಿ ವಿವಿಧ ಸುಮಧುರ ಹಾಡುಗಳನ್ನು ಹೇಳುವ ಮೂಲಕ ಸೇರಿದ್ದ ನೂರಾರು ಹಿರಿಯರನ್ನು ರಂಜಿಸಿದರು.

  • ಬಹುಮಾನ ವಿತರಣೆ:
    ಹಿರಿಯ ನಾಗರಿಕರಿಕರಿಗಾಗಿ ಕೆನರಾ ಬ್ಯಾಂಕ್​ ಪ್ರಾಯೋಜಕತ್ವದಲ್ಲಿ ಆಯೋಜಿಸಿದ್ದ ಪುರುಷ&ಮಹಿಳೆಯ ಪ್ರತ್ಯೇಕ ಕ್ರೀಡೆ ಮತ್ತು ಸಾಂಸತಿಕ ಸ್ಪರ್ಧೆಯಲ್ಲಿ ವಿಜೇತರಾದ ಬಿ.ಸೀತಾರಾಮ ಶೆಟ್ಟಿ, ಎನ್​.ನಾರಾಯಣ ಭಟ್​, ವಿಠ್ಠಲ ಪೂಜಾರಿ, ಭಾಸ್ಕರ್​ ರಾವ್​, ಎಂ.ದಾಸಪ್ಪ ಕಾಮತ್​, ಕೆ.ಮಂಜಪ್ಪ ಸುವರ್ಣ, ಬಾಲಕೃಷ್ಣ ನಾಯಕ್​, ಎ.ಲಕ್ಷಿ, ರುಕ್ಮಿಣಿ ಕೆ. ಭಟ್​, ಸರಳಾ ಕಾಂಚನ್​, ಜಯಲಕ್ಷಿ$್ಮ ಡಿ. ಕಾಮತ್​ ಸೇರಿದಂತೆ ಹಲವಾರು ಹಿರಿಯರಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net