ವಿಶ್ವ ಮನ್ನಣೆ ಪಡೆದ ಹಿಂದಿ

sanmana
Published on

ನರಗುಂದ: ಸರಳ ಹಾಗೂ ಸುಂದರ ಭಾಷೆಯಾಗಿರುವ ಹಿಂದಿ ಇಂದು ವಿಶ್ವದಲ್ಲಿಯೇ ಅತ್ಯಂತ ಜನಪ್ರಿಯತೆ ಪಡೆದ ಭಾಷೆಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಫ್. ಮಜ್ಜಗಿ ಹೇಳಿದರು.

ಪಟ್ಟಣದ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಂ.1ರಲ್ಲಿ ನರಗುಂದ ತಾಲೂಕು ಹಿಂದಿ ಭಾಷಾ ಶಿಕ್ಷಕರ ಸಂಘದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹಿಂದಿ ದಿನಾಚರಣೆಯ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿ ಶ್ರೀಮತಿ ಮಾಡಲಗೇರಿ ಮಾತನಾಡಿ, ಇದುವರೆಗೆ ಕೇವಲ ಉತ್ತರ ಭಾರತದಲ್ಲಿ ಮಾತ್ರ ಹೆಚ್ಚು ಪ್ರಚಲಿತದಲ್ಲಿದ್ದ ಹಿಂದಿ ಇಂದು ದಕ್ಷಿಣ ಭಾರತದಲ್ಲಿಯೂ ಸಾಕಷ್ಟು ಜನಪ್ರಿಯತೆ ಪಡೆಯುತ್ತಿದೆ ಎಂದರು.

ಉಪನ್ಯಾಸಕ ಆರ್.ಪಿ. ಆತ್ಮಾನಂದ ಕಿತ್ತೂರ, ಸುಮನ್ ಅನ್ವೇಕರ್, ಹಿಂದಿ ಭಾಷಾ ಶಿಕ್ಷಕರ ಸಂಘದ ಅಧ್ಯಕ್ಷ ಗಣೇಶಗೌಡ ಪಾಟೀಲ, ಗೌರವಾಧ್ಯಕ್ಷ ಜಡ್.ಎಂ. ಖಾಜಿ ಮಾತನಾಡಿದರು. ಹಿಂದಿ ಭಾಷಾ ಶಿಕ್ಷಕರ ಸಂಘದ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಫ್.ಮಜ್ಜಗಿ, ಶ್ರೀಮತಿ ಮಾಡಲಗೇರಿ, ಸುಮನ್ ಅನ್ವೇಕರ್, ಜಿ.ಎನ್. ದೊಡ್ಡಲಿಂಗಪ್ಪನವರ, ನಿವೃತ್ತ ಶಿಕ್ಷಕ ದೊಡ್ಡಮನಿ ಅವರನ್ನು ಸನ್ಮಾನಿಸಲಾಯಿತು.
ಶಿಕ್ಷಕ ಎಂ.ಕೆ. ಅಲ್ಲಿಭಾಯಿ, ಎಂ.ಆರ್.ಜವಳಿ, ಎಫ್.ಎಂ. ಹಾಡಕರ, ಶಿಕ್ಷಕ ಡಿ.ಎಂ.ಪಂಡರಿ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net