

ವಿಜಯವಾಣಿ ಸುದ್ದಿಜಾಲ ಧಾರವಾಡ
ಪತ್ರಿಕಾ ವಿತರಕರ ಸಂಘದಿ0ದ ಮೈಸೂರಿನಲ್ಲಿ ಆಯೋಜಿಸಿರುವ ವಿಶ್ವ ಪತ್ರಿಕಾ ವಿತರಕರ ದಿನಾಚರಣೆಯ ಲಾಂಛನವನ್ನು ರಂಗಾಯಣ ನಿರ್ದೇಶಕ ಡಾ. ರಾಜು ತಾಳಿಕೋಟಿ ಶನಿವಾರ ಬಿಡುಗಡೆ ಮಾಡಿದರು.
ಇದಕ್ಕೂ ಮೊದಲು ಕಾರ್ಯಕ್ರಮದ ರೂಪುರೇಷೆ ಕುರಿತು ಚರ್ಚಿಸಲು ಸಂಘದ ಪದಾಧಿಕಾರಿಗಳು, ಸದಸ್ಯರ ಪೂರ್ವಭಾವಿ ಸಭೆ ನಡೆಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಶಿವು ಹಲಗಿ, ಉಪಾಧ್ಯಕ್ಷ ಶೇಖರ ಬೇಲೂರ, ಕಾರ್ಯದರ್ಶಿ ನಾಗರಾಜ ಕುಲಕರ್ಣಿ, ಸಂಘಟನಾ ಕಾರ್ಯದರ್ಶಿ ಶಿವರಾಮ ಶಿರಗುಪ್ಪಿ, ಸದಸ್ಯರಾದ ಶ್ರೀಧರ ಪಾಸ್ತೆ, ಜೀಶಾನ್ ಬಾದಾಮಿ, ಗಜಾನನ ಭಟ್, ಪತ್ರೇಶ ಇಂಗಳದಾಳ, ಶ್ರೀ ರುದ್ರಮುನೀಶ್ವರ ಸ್ವಾಮೀಜಿ, ಇತರರು ಭಾಗವಹಿಸಿದ್ದರು.