ಪೊಲಿಯೋ ನಿರ್ಮೂಲನೆಯಲ್ಲಿ ರೋಟರಿ ಪಾತ್ರ ಮಹತ್ತರ: ಡಾ.ತ್ರಿಮೂರ್ತಿ ಅನಿಸಿಕೆ

world poliyo day
Published on

ಸುಬ್ರಹ್ಮಣ್ಯ: ಇಡೀ ವಿಶ್ವದಲ್ಲಿ ಪೊಲಿಯೋ ಮುಕ್ತವನ್ನಾಗಿಸಲು ರೋಟರಿ ಕ್ಲಬ್ ಶ್ರಮ ವಹಿಸಿದ್ದನ್ನು ನಾವಿಲ್ಲಿ ನೆನಪಿಸಲೇಬೇಕು. ಇಂದು ಭಾರತ ಪೋಲಿಯೋ ಮುಕ್ತ ದೇಶವಾಗಿದೆ. ಯಾವೊಂದು ಕೇಸುಗಳು 2014ರಿಂದ ಬಂದಿರುವುದಿಲ್ಲ. ಪೋಲಿಯೋ ನಿರ್ಮೂಲನೆಗೊಳಿಸಲು ವ್ಯಾಕ್ಸಿನ್ ಹಾಕುವಲ್ಲಿ ಹಾಗೂ ಮಾಹಿತಿಗಳನ್ನು ನೀಡುವಲ್ಲಿ ಸಂಘ ಸಂಸ್ಥೆಗಳ, ಆರೋಗ್ಯ ಕಾರ್ಯಕರ್ತರ, ಆರೋಗ್ಯ ಸಿಬ್ಬಂದಿ ಕಾರ್ಯ ಶ್ಲಾಘನೀಯ ಎಂದು ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ತ್ರಿಮೂರ್ತಿ ತಿಳಿಸಿದರು.

ಸುಬ್ರಹ್ಮಣ್ಯ ರೋಟರಿ ಕ್ಲಬ್ ಆಯೋಜಿಸಿದ್ದ ವಿಶ್ವ ಪೊಲಿಯೋ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಸುಬ್ರಹ್ಮಣ್ಯರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ನಾಯರ್ ಅಧ್ಯಕ್ಷತೆ ವಹಿಸಿದ್ದರು. ಜೋನಲ್ ಲೆಫ್ಟಿನೆಂಟ್ ವಿಶ್ವನಾಥ ನಡುತೋಟ, ಉಪ ವಲಯಾರಣ್ಯಾಧಿಕಾರಿ ಮನೋಜ್, ಪ್ರಮುಖರಾದ ಅಶೋಕ್ ಕುಮಾರ್,ದಿನೇಶ್ ಎಣ್ಣೆಮಜಲ್ ಹಾಗೂ ಆರೋಗ್ಯ ಹಿರಿಯ, ಕಿರಿಯ, ಕಾರ್ಯಕರ್ತರು ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕಿಯರು ಸಹಾಯಕರು ಉಪಸಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net