ಮೂಲವ್ಯಾಧಿಗೆ ಚಿಕಿತ್ಸೆ ಪಡೆಯದಿದ್ದರೆ ಸಮಸ್ಯೆ ಗಂಭೀರ: ಎಡಿಸಿ ಡಾ.ಎಚ್.ಎಲ್.ನಾಗರಾಜು ಕಿವಿಮಾತು

World Piles Day Mandya
Published on

ಮಂಡ್ಯ: ಪೈಲ್ಸ್ ರೋಗಕ್ಕೆ ಸಂಬಂಧಿಸಿದಂತೆ ಮೂಲವ್ಯಾಧಿಗೆ ಚಿಕಿತ್ಸೆ ನೀಡದೇ ಹೋದಲ್ಲಿ ಗಂಭೀರ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಎಸ್.ಡಿ.ಜಯರಾಂ ಆಸ್ಪತ್ರೆ, ಎಸ್.ಡಿ.ಜಯರಾಂ ಸ್ಕೂಲ್ ಆಫ್ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಸೈನ್ಸ್ ಸಂಸ್ಥೆಯಿಂದ ವಿಶ್ವ ಪೈಲ್ಸ್ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಜಾಥಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಯಲು ಮುಕ್ತ ಶೌಚ ರಾಷ್ಟ್ರವನ್ನಾಗಿಸಲು ಸಂಕಲ್ಪದ ನಡುವೆ ವಿಶ್ವ ಪೈಲ್ಸ್ ದಿನ ಆಚರಣೆಯಾಗುತ್ತಿದೆ. ಈ ರೋಗವನ್ನು ನಿರ್ಲಕ್ಷೃ ಮಾಡಿದರೆ ಗುದನಾಳದಲ್ಲಿ ರಕ್ತಸ್ರಾವ, ಸೋಂಕು, ಪಿಸ್ತೂಲದಂತಹ ಸಮಸ್ಯೆಗಳು ಉದ್ಬವಿಸುತ್ತದೆ. ಆದ್ದರಿಂದ ರೋಗದಿಂದ ಬಳಲುತ್ತಿರುವವರು ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ ಎಂದರು.

ಎಸ್.ಡಿ.ಜಯರಾಂ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಮಾದೇಶ್ ಮಾತನಾಡಿ, ಬದಲಾದ ಆಹಾರಕ್ರಮದಿಂದ ಪೈಲ್ಸ್ ರೋಗ ಹೆಚ್ಚಾಗುತ್ತಿದೆ. ಆಧುನಿಕತೆ, ನಗರೀಕರಣ ಬೆಳೆದಂತೆಲ್ಲ ಮನುಷ್ಯನ ಜೀವನಕ್ರಮ, ಆಹಾರ ಪದ್ಧತಿಗಳು ಬದಲಾಗುತ್ತಿವೆ. ಒತ್ತಡದ ಜೀವನ, ನಾರಿನಾಂಶವಿಲ್ಲದ ಆಹಾರ ಸೇವನೆಯಿಂದ ಪೈಲ್ಸ್ ರೋಗ ಹೆಚ್ಚಾಗುತ್ತಿದೆ ಎಂದು ನುಡಿದರು.

ಎಸ್.ಡಿ.ಜಯರಾಂ ಆಸ್ಪತ್ರೆ ಸಿಬ್ಬಂದಿ ಅಕ್ಷಯ್, ಸತೀಶ್, ಪವನ್, ಕರಣ್, ರಜನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net