8ರಿಂದ ವಿಶ್ವ ಫಿಸಿಯೋಥೆರಪಿ ದಿನ

Cauvery Hospital
Published on

ಮೈಸೂರು: ಫಿಸಿಯೋಥೆರಪಿ ದಿನದ ಅಂಗವಾಗಿ ಕಾವೇರಿ ಫಿಸಿಯೋಥೆರಪಿ ಕಾಲೇಜು ಮತ್ತು ಕಾವೇರಿ ಆಸ್ಪತ್ರೆ ವತಿಯಿಂದ 5 ದಿನಗಳ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.


ಸೆ.8 ರಂದು ವಿಶ್ವ ಫಿಸಿಯೋಥೆರಪಿ ದಿನ ಆಚರಿಸುತ್ತಿದ್ದು, ಔಷಧ ಮತ್ತು ಶಸ್ತ್ರಚಿಕಿತ್ಸಾ ವಿಧಾನಗಳ ಅಗತ್ಯವನ್ನು ಕಡಿಮೆಗೊಳಿಸುವ ದೃಷ್ಟಿಯಿಂದ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಸಮಾಜಕ್ಕೆ ಉತ್ತಮ ಆರೋಗ್ಯ ಮತ್ತು ಶಿಕ್ಷಣ ನೀಡಬೇಕು ಎಂದು ಕಾವೇರಿ ಆಸ್ಪತ್ರೆ ವತಿಯಿಂದ ಸೆ.8 ರಂದು ಮೈಸೂರು ಅರಮನೆಯಿಂದ ಕಾವೇರಿ ಆಸ್ಪತ್ರೆವರೆಗೆ ವಾಕಥಾನ್, 9 ರಂದು ಫಿಟ್ನೆಸ್ ಜಾಗೃತಿಗಾಗಿ ಚಾಮುಂಡಿಬೆಟ್ಟ ಹತ್ತುವ ಕಾರ್ಯಕ್ರಮ, 12 ಮತ್ತು 13 ರಂದು ಎಚ್.ಡಿ.ಕೋಟೆಯಲ್ಲಿ ಉಚಿತ ಆರೋಗ್ಯ ಶಿಬಿರ ಹಾಗೂ ಸೆ. 14 ರಂದು ಕಾವೇರಿ ಆಸ್ಪತ್ರೆಯಲ್ಲಿ ಅಸ್ಥಿ ಸಂಧಿವಾತ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ. ನಾವು ಜೀವನದಲ್ಲಿ ಭೌತಿಕ ಮಾರ್ಗದಲ್ಲಿ ಸಾಗೋಣ ಎಂದು ಕಾವೇರಿ ಕಾಲೇಜ್ ಆಫ್ ಫಿಸಿಯೋಥೆರಪಿ ಪ್ರಾಚಾರ್ಯ ಜಿ.ಪವನ್‌ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ರೋಗಿಗಳಿಗೆ ಕ್ಲಿನಿಕಲ್ ಸೇವೆಗಳನ್ನು ಸೇಂಟ್ ಅಲ್ಫೋನ್ಸಾ ಬಿಲ್ಡಿಂಗ್, ತ್ರಿವೇಣಿ ಸರ್ಕಲ್, ಡಾ.ರಾಜ್‌ಕುಮಾರ್ ರಸ್ತೆ ಇಲ್ಲಿ ದೊರೆಯಲಿದೆ. ಯಾವುದೇ ಪ್ರಶ್ನೆ ಅಥವಾ ಸಮಾಲೋಚನೆಗಳಿಗಾಗಿ ಮೊ: 9886704300, 9535927437 ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net