ವಿಶ್ವ ಬಾಯಿ ಆರೋಗ್ಯ ದಿನಾಚರಣೆ

20-KGLPHOTO-4,
ಪಟ್ಟಣದ ಸರ್ಕಾರಿ ಉಪವಿಭಾಗ ಆಸ್ಪತ್ರೆಯ ಮುಂಭಾಗ ವಿಶ್ವಬಾಯಿ ಆರೋಗ್ಯ ದಿನಾಚರಣೆ ಜಾಥಾ ಕಾರ್ಯಕ್ರಮಕ್ಕೆ ಡಾ. ರಾಜಶೇಖರ್ ಚಾಲನೆ ನೀಡಿದರು. ಡಾ.ಟೀನಾ, ಡಾ.ರಾಜು, ಡಾ.ಪರಮೇಶ್, ಉಮಾದೇವಿ ಇದ್ದರು.
Published on

ಕೊಳ್ಳೇಗಾಲ : ಪಟ್ಟಣದ ಸರ್ಕಾರಿ ಉಪವಿಭಾಗ ಆಸ್ಪತ್ರೆಯ ಮುಂಭಾಗದಲ್ಲಿ ವಿಶ್ವ ಬಾಯಿ ಆರೋಗ್ಯ ದಿನಾಚರಣೆ ಅಂಗವಾಗಿ ಬುಧವಾರ ಅರಿವು ಜಾಥಾ ಕಾರ್ಯಕ್ರಮ ನಡೆಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸರ್ಕಾರಿ ಉಪವಿಭಾಗ ಆಸ್ಪತ್ರೆ, ಜೆಎಸ್‌ಎಸ್ ನರ್ಸಿಂಗ್ ಕಾಲೇಜು, ಸುಪ್ರೀಂ ನರ್ಸಿಂಗ್ ಕಾಲೇಜು ಹಾಗೂ ಅಸ್ಸಿಸ್ಸಿ ಶಾಲೆಯ ಮಕ್ಕಳಿಂದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಜಾಥಾ ಕಾರ್ಯಕ್ರಮಕ್ಕೆ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ರಾಜಶೇಖರ್ ಚಾಲನೆ ನೀಡಿದರು. ಮಾ.20 ರಂದು ಎಲ್ಲೆಡೆ ವಿಶ್ವ ಬಾಯಿ ಆರೋಗ್ಯ ದಿನ ಆಚರಣೆ ಮಾಡಲಾಗುತ್ತಿದೆ. ಅದರಂತೆ ವಿಶ್ವ ಆರೋಗ್ಯ ದಿನದ ಘೋಷ ವಾಕ್ಯದಡಿ ಆರೋಗ್ಯಕರ ಬಾಯಿ ಆರೋಗ್ಯಕರ ದೇಹ ಎಂಬ ಘೋಷಣೆಯೊಂದಿಗೆ ಕೊಳ್ಳೇಗಾಲದಲ್ಲಿ ನರ್ಸಿಂಗ್ ಕಾಲೇಜು ಹಾಗೂ ಅಸ್ಸಿಸ್ಸಿ ಶಾಲೆಯ ಕಾಲೇಜು ಮಕ್ಕಳ ಜತೆಗೂಡಿ ಜಾಥಾ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು. ಜಾಥಾವು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ವೈದ್ಯರಾದ ಡಾ.ಟೀನಾ, ಡಾ.ರಾಜು, ಡಾ.ಪರಮೇಶ್, ಶುಶ್ರೂಷಕಿ ಉಮಾದೇವಿ, ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net