

ಧಾರವಾಡ: ದಾದಿಯರ ಅದ್ಭುತ ಕೆಲಸವನ್ನು ಗುರುತಿಸುವ ಉದ್ದೇಶದಿಂದ ವಿಶ್ವ ದಾದಿಯರ ದಿನ ಆಚರಿಸಲಾಗುತ್ತದೆ. ರೋಗಿಗಳಿಗೆ ಸಹಾನುಭೂತಿಯ ಆರೈಕೆಯನ್ನು ಒದಗಿಸುವ ಸಮರ್ಪಿತ ವೃತ್ತಿಪರರು ಆರೋಗ್ಯ ರಕ್ಷಣಾ ವ್ಯವಸ್ಥೆಯ ಬೆನ್ನೆಲುಬಾಗಿದ್ದಾರೆ ಭಾರತೀಯ ವೈದ್ಯಕೀಯ ಸಂಘದ ಧಾರವಾಡ ಶಾಖೆ ಅಧ್ಯಕ್ಷ ಡಾ. ಸತೀಶ ಇರಕಲ್ ಹೇಳಿದರು.
ಭಾರತೀಯ ವೈದ್ಯಕೀಯ ಸಂಘ, ಶ್ರೀಯಾ ಕಾಲೇಜ್ ಆಫ್ ನರ್ಸಿಂಗ್ ಸಂಯೋಗದೊAದಿಗೆ ಶನಿವಾರ ಆಯೋಜಿಸಿದ್ದ ವಿಶ್ವ ದಾದಿಯರ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯಾಽಕಾರಿ ಡಾ. ಶ್ರೀಧರ ದಂಡಪ್ಪನವರ ಮಾತನಾಡಿ, ದಣಿವರಿಯದೆ ಆರೈಕೆ ಮಾಡುವ ದಾದಿಯರ ಕಾರ್ಯ ಶ್ಲಾಘನೀಯ ಎಂದರು.
ಶುಶ್ರೂಷಾಽಕಾರಿ ಡೆಲಿಮಾ ಪಿ. ಮಾತನಾಡಿ, ಕನ್ನಡಿಗರು ಭಾರತದಲ್ಲೇ ಇದ್ದು ರೋಗಿಗಳ ಸೇವೆ ಮಾಡಬೇಕು ಎಂದರು. ಶ್ರೀಯಾ ಕಾಲೇಜಿನ ವಿದ್ಯಾರ್ಥಿಗಳು `ಫ್ಲಾರೆನ್ಸ್ ನೈಟಿಂಗೇಲ್'ರ ಕಿರುನಾಟಕ ಪ್ರದರ್ಶಿಸಿದರು.
ವಿವಿಧ ಆಸ್ಪತ್ರೆಗಳ ದಾದಿಯರಾದ ಡೆಲಿಮಾ ಪಿ., ಮೋನಿಕಾ ಬಾಂಚ್, ತ್ರಿವೇಣಿ, ಜೆರುಷಾ, ಜಯಶ್ರೀ ಅವರನ್ನು ಸನ್ಮಾನಿಸಲಾಯಿತು.