ತಾಯಿ ಋಣ ತೀರಿಸಲು ಅಸಾಧ್ಯ

10Anand2
Published on

ಬೆಳಗಾವಿ:ತಾಯಿ ತ್ಯಾಗ, ಪ್ರೀತಿ, ಮಮತೆ ಎಂದಿಗೂ ಮರೆಯಲಾಗದು. ತಾಯಿ ಋಣ ತೀರಿಸಲು ಅಸಾಧ್ಯ ಎಂದು ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ ಮುಖ್ಯ ನಿರ್ವಹಣಾಧಿಕಾರಿ ಪ್ರಶಾಂತ ದೇಸಾಯಿ ಹೇಳಿದರು.

ನಗರದ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯ ಸ್ತ್ರೀರೋಗ ಹಾಗೂ ಪ್ರಸೂತಿ ವಿಭಾಗದಿಂದ ಆಸ್ಪತ್ರೆಯ ಚರಕಾ ಸಭಾಭವನದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ತಾಯಂದಿರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾಯಿ ನೆನೆಯುವುದಕ್ಕಾಗಿ ಪ್ರತಿವರ್ಷ ಮೇ ತಿಂಗಳ 2ನೇ ಶನಿವಾರ ವಿಶ್ವದೆಲ್ಲೆಡೆ ವಿಶ್ವ ತಾಯಂದಿರ ದಿನಾಚರಣೆ ಮಾಡಲಾಗುತ್ತಿದೆ. ತಾಯಿ ಮಮತೆ ಪಡೆದು ಅವರಿಗೆ ಗೌರವ ಸಲ್ಲಿಸಲು ಸಿಕ್ಕಿರುವ ಈ ಅವಕಾಶವನ್ನು ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ್ದ ಆಸ್ಪತ್ರೆಯ ವೈದ್ಯಕೀಯ ಮುಖ್ಯಾಧಿಕಾರಿ ಡಾ.ಆರ್.ಜಿ.ನೆಲವಿಗಿ ಮಾತನಾಡಿ, ಒಬ್ಬ ವ್ಯಕ್ತಿಯ ಜೀವನ ರೂಪಿಸುವಲ್ಲಿ ತಾಯಿ-ತಂದೆಯರ ಪಾತ್ರ ಅನನ್ಯ. ಅವರು ಮಗುವಿನ ಬೆಳವಣಿಗೆಗೆ ಪಟ್ಟ ಕಷ್ಟ, ನೋವುಗಳನ್ನು ನಾವು ಮರೆಯಬಾರದು ಎಂದು ಹೇಳಿದರು.

ಪ್ರಸೂತಿ ವಿಭಾಗದ ಮುಖ್ಯಸ್ಥ ಡಾ.ಸತೀಶ ದಾಮಣಕರ ಮಾತನಾಡಿದರು. ಆಸ್ಪತ್ರೆಯ ಸ್ತ್ರೀರೋಗ ಹಾಗೂ ಪ್ರಸೂತಿ ವಿಭಾಗದ ವೈದ್ಯ ಡಾ.ಅಮೃತಾ ಸಾಲ್ಕರ, ಡಾ.ಕೆ.ಎನ್ ಹೋಳಿಕಟ್ಟಿ, ಡಾ.ಸಂಗೀತಾ, ಡಾ.ಸಯ್ಯದಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net