ಮೈಸೂರು ಕಸಾಪದಿಂದ ವಿಶ್ವ ತಾಯಂದಿರ ದಿನಾಚರಣೆ

World Mother's Day Celebration from Mysore Kasapa
Published on

ಮೈಸೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪದಲ್ಲಿ ಬುಧವಾರ ವಿಶ್ವ ತಾಯಂದಿರ ದಿನಾ ಚರಣೆ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ತೋರಿದ ಶಾರದಾ ಅಶ್ವತ್ಥ್, ಮೀನಾ ತೂಗುದೀಪ, ಸಾಕಮ್ಮ, ಸುಧಾ, ಸುನಂದಮ್ಮ ಲಕ್ಕಣ್ಣ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಪ್ರಯುಕ್ತ ಚುಟುಕು ಮತ್ತು ಮುಕ್ತಕ ಕವಿಗೋಷ್ಠಿ, ಗೀತ ನಮನ ಹಾಗೂ ಭರತನಾಟ್ಯ ಏರ್ಪಡಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಡಿ. ತಿಮ್ಮಯ್ಯ ಮಾತನಾಡಿ, ಪ್ರತಿಯೊಂದು ಮಕ್ಕಳ ಸಾಧನೆಯ ಹಿಂದೆ ತಾಯಂದಿರ ಪರಿಶ್ರಮ, ತ್ಯಾಗ್ಯ ಇರುತ್ತದೆ. ಇಂದು ನಾನು ಈ ಸ್ಥಾನಕ್ಕೆ ತಲುಪಲು ನನ್ನ ತಾಯಿಯೇ ಕಾರಣ. ನನ್ನ ತಾಯಿ ನನಗೆ ಬೆಂಬಲವಾಗಿ ನಿಲ್ಲದೆ ಇದ್ದಿದ್ದರೆ ನಾನು ವೈದ್ಯನಾಗುತ್ತಿರಲಿಲ್ಲ ಎಂದು ಹೇಳಿದರು.

ವೇದಿಕೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಗೌರವ ಕಾರ್ಯದರ್ಶಿ ಮ.ನ. ಲತಾ ಮೋಹನ್,
ಸಮಾಜ ಸೇವಕ ರಘುರಾಮ್ ವಾಜಪೇಯಿ, ಸಂಸ್ಕೃತ ವಿದ್ವಾಂಸರಾದ ಡಾ.ಕೆ. ಲೀಲಾ ಪ್ರಕಾಶ್, ಅಭಿರುಚಿ ಬಳಗ ಅಧ್ಯಕ್ಷ ಎನ್.ವಿ. ರಮೇಶ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net