

ಮಾನ್ವಿ: ಲಿಂಗಸುಗೂರಿನಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರ ಸಾನ್ನಿಧ್ಯದಲ್ಲಿ ಆಯೋಜಿಸಲಾಗಿರುವ ದಸರಾ ಧರ್ಮ ಸಮ್ಮೇಳನದ ಭಿತ್ತಿಪತ್ರಗಳನ್ನು ಕಲ್ಮಠದ ಪೀಠಾಧ್ಯಕ್ಷ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಗುರುವಾರ ಬಿಡುಗಡೆ ಮಾಡಿದರು.
ಪಟ್ಟಣದ ಕಲ್ಮಠದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಭಿತ್ತಿಪತ್ರ ಬಿಡುಗಡೆಗೊಳಸಿ ಮಾತನಾಡಿ, ರಂಭಾಪುರಿ ಪೀಠದ ಘೋಷ ವಾಕ್ಯ ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಸಂದೇಶ ಶ್ರೇಷ್ಠವಾಗಿದ್ದು, ಅ.15 ರಿಂದ 24ರ ವರಗೆ ನಡೆಯಲಿರುವ ರಂಭಾಪುರಿ ಪೀಠದ ಶರನ್ನವರಾತ್ರಿ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕು. ದಸರಾ ಧರ್ಮ ಸಮ್ಮೇಳನ ವಿಶ್ವಕ್ಕೆ ಮಾದರಿ ಆಗಿದೆ. ಎಲ್ಲ ಜಾತಿ, ಮತ, ಪಂಥದವರು ಒಳಗೊಂಡು ನಡೆಸುವ ಈ ಸಮ್ಮೇಳನದಲ್ಲಿ ತಾಲೂಕಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.
ದಸರಾ ಧರ್ಮ ಸಮ್ಮೇಳನ ಸೇವಾ ಸಮಿತಿ ಗೌರವಾಧ್ಯಕ್ಷ ಅಮರೇಶ್ವರ ಗುರುಗಜದಂಡ ಶಿವಾಚಾರ್ಯರು, ದಸರಾ ಧರ್ಮ ಸಮ್ಮೇಳನದ ಸ್ವಾಗತ ಸಮಿತಿ ಸದಸ್ಯರಾದ ಜಡೆಯ್ಯಸ್ವಾಮಿ ಹಿರೇಮಠ, ಗಂಗಾಧರಸ್ವಾಮಿ ಬ್ಯಾಳಿಮಠ, ಶಂಭುಲಿಂಗ ಕಳಸದಗುಡಿ, ಬಿ.ಎ ನಂದಿಕೋಲಮಠ, ಅಮರೇಶ ಛಾವಣಿ, ಸ್ಥಳೀಯ ಪ್ರಮುಖರಾದ ಅಮರೇಶ ಚಿಂಚಲ, ರುದ್ರಯ್ಯಸ್ವಾಮಿ ಭೋಗಾವತಿ, ವೀರಭದ್ರಯ್ಯ ಸ್ವಾಮಿ ಸಂಗಾಪುರ, ಶಿವಯ್ಯಸ್ವಾಮಿ ಇದ್ದರು.