

ಮಂಡ್ಯ: ಹಾಲಿನ ಮಹತ್ವವನ್ನು ಎಲ್ಲರೂ ಅರಿತುಕೊಂಡು ಅದನ್ನು ಬಳಸುವುದು ಮುಖ್ಯವಾಗಬೇಕು ಎಂದು ಮನ್‌ಮುಲ್ ವ್ಯವಸ್ಥಾಪಕ ನಿರ್ದೇಶಕ ಮಂಜೇಶ್ ಸಲಹೆ ನೀಡಿದರು.
ನಗರದ ಪ್ರೇರಣಾ ಟ್ರಸ್ಟ್‌ನಲ್ಲಿ ಮನ್‌ಮುಲ್ ಸಹಯೋಗದಲ್ಲಿ ವಿಶ್ವ ಹಾಲು ದಿನಾಚರಣೆ ಅಂಗವಾಗಿ ‘ಪೌಷ್ಠಿಕ ಮತ್ತು ಸುಸ್ತಿರ ಹೈನು ಉದ್ಯಮದೊಂದಿಗೆ ಸಂಭ್ರಮಿಸೋಣ’ ಶೀರ್ಷಿಕೆಯಡಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂಗವಿಕಲ ಮಕ್ಕಳಿಗೆ ಹಾಲು ವಿತರಿಸಿ ಮಾತನಾಡಿದರು.
ವಿಶ್ವಹಾಲು ದಿನವನ್ನು ಜೂ.1ರಂದು ಆಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ವೃದ್ಧಾಶ್ರಮಗಳಲ್ಲಿ ಹಾಲು ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದ್ದೇವೆ. ಎಲ್ಲರಿಗೂ ಒಳಿತಾಗಲಿ ಎಂಬುವ ದೃಷ್ಟಿಯಿಂದ ಮನ್‌ಮುಲ್ ಪ್ರಾಡಕ್ಟ್‌ಗಳನ್ನು ಸಹ ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ. ಒಕ್ಕೂಟದಿಂದ ಅಂಗವಿಕಲ ಮಕ್ಕಳಿಗೆ ನೆರವಾಗುವ ನಿಟ್ಟಿನಲ್ಲಿ ಹಲವು ಜನಪರ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದರು.
ಮನ್‌ಮುಲ್ ಅಧ್ಯಕ್ಷ ಬೋರೇಗೌಡ, ಉಪಾಧ್ಯಕ್ಷ ಎಂ.ಎಸ್.ರಘುನಂದನ್, ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಪ್ರದೀಪ್, ಕಣ್ಣೂರು ಇತರರಿದ್ದರು. ಇದೇ ಸಂದರ್ಭದಲ್ಲಿ ಪ್ರೇರಣಾ ಟ್ರಸ್ಟ್‌ನಲ್ಲಿರುವ ಅಂಗವಿಕಲರಿಗೆ ಹಾಲು, ಬಿಸ್ಕೆಟ್, ಪಾನೀಯಗಳನ್ನು ನೀಡಲಾಯಿತು.