ಮಲೇರಿಯಾ ತಡೆಗೆ ನೈರ್ಮಲ್ಯ ಅಗತ್ಯ

26 Dwd 6
Published on

ಧಾರವಾಡ: ಮಲೇರಿಯಾ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗ. ಮಲೇರಿಯಾ ನಿರ್ಮೂಲನೆಗೆ ಆರೋಗ್ಯ ಇಲಾಖೆ ವಿವಿಧ ಕ್ರಮ ಕೈಗೊಳ್ಳುತ್ತಿದೆ. ಪ್ರತಿಯೊಬ್ಬರೂ ತಮ್ಮ ಮನೆ ಸುತ್ತ ನೈರ್ಮಲ್ಯ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಆಮಸಿದ್ಧ ಮಜ್ಜಿಗಿ ಹೇಳಿದರು.
ನಗರದ ಶ್ರೀಯಾ ಕಾಲೇಜು ಭಾರತೀಯ ವೈದ್ಯಕೀಯ ಸಂಘದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಮಲೇರಿಯಾ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಸತೀಶ ಇರಕಲ್ ವಿಶ್ವ ಮಲೇರಿಯಾ ದಿನಾಚರಣೆಯ ಮಹತ್ವ ವಿವರಿಸಿದರು. ಡಾ. ಅರವಿಂದ ಯೇರಿ ಮಲೇರಿಯಾ ತಡೆಯುವ ಬಗೆ ವಿವರಿಸಿದರು.
ಡಾ. ಸುಹಾಸ ಹಂಚಿನಮನಿ, ಪ್ರಾಚಾರ್ಯ ಡಾ. ರೋಡಾ ಜೇಸುರಾಜ್, ಇತರರಿದ್ದರು. ಪರ್ವೀನಾ ಪ್ರಾರ್ಥಿಸಿದರು. ಸ್ಯಾಮ್ಯುಯಲ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net