ವಿಶ್ವಕ್ಕೆ ಪ್ರೀತಿ, ದಯೆಯ ಬೆಳಕು ನೀಡಿದ ಯೇಸುಕ್ರಿಸ್ತ: ಕಂಪ್ಲಿಯಲ್ಲಿ ಕ್ರಿಸ್‌ಮಸ್ ಸಂಭ್ರಮ

251221 Kampli Christmas Celebration
ಕಂಪ್ಲಿ ಎಲ್ ಷಡ್ಡಾಯ್ ಚರ್ಚ್‌ನಲ್ಲಿ ಕ್ರಿಸ್‌ಮಸ್ ನಿಮಿತ್ತ ಭಕ್ತರು ಯೇಸುವಿನ ಕುರಿತು ಹಾಡುಗಳನ್ನು ಹಾಡಿದರು.
Published on

ಕಂಪ್ಲಿ: ಯೇಸುಕ್ರಿಸ್ತ ಇಡೀ ಜಗತ್ತಿಗೆ ಪ್ರೀತಿ ಮತ್ತು ದಯೆಯ ಬೆಳಕನ್ನು ನೀಡಿದರು ಎಂದು ಇಲ್ಲಿನ ಎಲ್ ಷಡ್ಡಾಯ್ ಚರ್ಚ್ ಫಾದರ್ ಪಾಲ್ ಪಂಪಾಪತಿ ಹೇಳಿದರು. ಇಲ್ಲಿನ ಐತಿಹಾಸಿಕ ಸೋಮಪ್ಪ ಗುಡಿ ಬಳಿಯ ಎಲ್ ಷಡ್ಡಾಯ್ ಚರ್ಚ್ ಆವರಣದಲ್ಲಿ ಏರ್ಪಡಿಸಿದ್ದ ಕ್ರಿಸ್‌ಮಸ್ ಆಚರಣೆಯಲ್ಲಿ ಮಾತನಾಡಿದರು. ಸರ್ವರನ್ನು ದೇವರತ್ತ ಕರೆದುಕೊಂಡು ಹೋಗುವುದಕ್ಕೆ ಯೇಸು ಮನುಷ್ಯನಾಗಿ ಜನಿಸಿದ ದಿನ ಕ್ರಿಸ್‌ಮಸ್ ಆಗಿದೆ. ಎಲ್ಲರೂ ಪ್ರೀತಿ ಪ್ರೇಮ, ಸಾಮರಸ್ಯದಿಂದ ಜೀವಿಸಬೇಕು ಎಂದು ತಿಳಿಸಿದರು.

ಕ್ರಿಸ್‌ಮಸ್ ನಿಮಿತ್ತ ಕೇಕ್ ಕತ್ತರಿಸಲಾಯಿತು. ಬಡವರಿಗೆ ವಸ್ತ್ರದಾನ ಮಾಡಲಾಯಿತು.ಕ್ರಿಸ್ತನ ಜನನ ಮತ್ತು ವೈಭವ, ಸಂದೇಶದ ಹಾಡುಗಳನ್ನು ಹಾಡಲಾಯಿತು. ಪ್ರಮುಖರಾದ ರಬೇಕಾ, ಯಶ್ವಂತಿ, ಮೌನಿಕಾ, ವಾಣಿ, ವಿರೂಪಾಕ್ಷಿ, ನಾಗರಾಜ, ಸೋಮಪ್ಪ, ಗಣೇಶ್ ಇತರರಿದ್ದರು.

ಸಹಾಯಮಾತೆ ದೇವಾಲಯ: ಇಲ್ಲಿನ ಸಕ್ಕರೆ ಕಾರ್ಖಾನೆ ಪ್ರದೇಶದಲ್ಲಿನ ಸಹಾಯಮಾತೆ ದೇವಾಲಯದ ಆವರಣದಲ್ಲಿ ಕ್ರಿಸ್‌ಮಸ್ ನಿಮಿತ್ತ ಯೇಸುಕ್ರಿಸ್ತನ ಜನನ ವೃತ್ತಾಂತ ಸಾರುವ ಕ್ರಿಬ್ಸ್ ರಚಿಸಲಾಗಿತ್ತು. ಫಾ.ವೈ.ಆನಂದ್ ಮಾತನಾಡಿ, ಶಾಂತಿ, ಸೌಹಾರ್ದತೆ ಸಾರಲು ಯೇಸು ಜನಿಸಿದರು. ಭರವಸೆ ಕಳೆದುಕೊಂಡ ಮನುಕುಲಕ್ಕೆ ಸಾಂತ್ವನ ನೀಡಿ, ಬದುಕನ್ನು ಪ್ರೀತಿಸುವಂತೆ ಯೇಸು ಉಪದೇಶ ನೀಡಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net