ಕಾಸರಗೋಡಿನಲ್ಲಿ ವಿಶ್ವ ಸಾಕ್ಷರತಾ ದಿನ

Ksd_Literacy-day
Published on

ಕಾಸರಗೋಡು: ಜಿಲ್ಲಾ ಸಾಕ್ಷರತಾ ಮಿಷನ್​ನ ಆಶ್ರಯದಲ್ಲಿ ವಿಶ್ವ ಸಾಕ್ಷರತಾ ದಿನಾಚರಣೆ ಅಂಗವಾಗಿ ಕಾಸರಗೋಡು ಸರ್ಕಾರಿ ಹೈಯರ್​ ಸೆಕೆಂಡರಿ ಶಾಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಯಿತು. ಶಾಸಕ ಎನ್​.ಎ.ನೆಲ್ಲಿಕುನ್ನು ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಎಸ್​.ಎನ್​.ಸರಿತಾ ಅಧ್ಯಕ್ಷತೆ ವಹಿಸಿದ್ದರು.

ಆರಂಭಿಕ ಸಾಕ್ಷರತಾ ಕಾರ್ಯಕರ್ತರು ಹಾಗೂ ಸಾಕ್ಷರರಾದ ಹಿರಿಯರು, ಸಮಾನಾಂತರ ಪರೀಕ್ಷೆಗಳಲ್ಲಿ ಉನ್ನತ ಸಾಧಕರಾದ ಶಿಕ್ಷಕರು, ಪ್ರೇರಕರನ್ನು ಗೌರವಿಸಲಾಯಿತು. ವಿಪತ್ತು ನಿರ್ವಹಣೆ ಕುರಿತು ಉಪನ್ಯಾಸ, ಸಾಕ್ಷರತಾ ಸಂದೇಶ, ಸಾಕ್ಷರತಾ ಪ್ರತಿಜ್ಞೆ ಕೈಗೊಳ್ಳಲಾಯಿತು. ಕಲಾ ಕಾರ್ಯಕ್ರಮಗಳೂ ನಡೆದವು.

ಸಾಕ್ಷರತಾ ಮಿಷನ್​ ಮಾನಿಟರಿಂಗ್​ ಸಂಯೋಜಕ ಶಾಜುಜೋನ್​, ಜಿಲ್ಲಾ ಸಂಯೋಜಕ ಪಿ.ಎನ್​.ಬಾಬು, ಹಿರಿಯ ಸಾಕ್ಷರತಾ ಕಾರ್ಯಕರ್ತ ಪಪ್ಪನ್​ ಕುಟ್ಟಮತ್​, ಕೆ.ವಿ.ರಾವನ್​, ಕೆ.ವಿ.ವಿಜಯನ್​, ಮಾಯಿಲ್​ಪಾಡಿ ರಾವನ್​, ಸಿಪಿವಿ ವಿನೋದ್​ ಕುಮಾರ್​ ಮತ್ತು ಕೌನ್ಸಿಲರ್​ ಅಫೀಲಾ ಬಶೀರ್​, ಕೈಟ್​ ಜಿಲ್ಲಾ ಸಂಯೋಜಕ ರೋಜಿ ಜೋಸೆಫ್​, ಸತೀಶನ್​ ಬೇವಿಂಜ, ಎಂ.ಉಮೇಶನ್​, ಕೆ.ರಾಧಾಕೃಷ್ಣನ್​, ಎಂ.ಶಮೀರ್​, ಸಿ.ಕೆ.ಪುಷ್ಪ ಕುಮಾರಿ, ಕೆ.ಪಿ.ಪುಷ್ಪಲತಾ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net