ರಾಯಚೂರಿನಲ್ಲಿ ಮಾರ್ಚ್ 9ರಂದು ವಿಶ್ವ ಕಿಡ್ನಿ ದಿನ ನಿಮಿತ್ತ ಜಾಗೃತಿ ನಡಿಗೆ

Dr Anirudh Kulkarni
ಡಾ.ಅನಿರುದ್ಧ ಕುಲಕರ್ಣಿ
Published on

ರಾಯಚೂರು: ವಿಶ್ವ ಕಿಡ್ನಿ ದಿನಾಚರಣೆ ನಿಮಿತ್ತ ಮಾ.9ರಂದು ನಗರದಲ್ಲಿ ಜಾಗೃತಿ ನಡಿಗೆ ಹಾಗೂ ಕೃಷಿ ವಿಜ್ಞಾನಗಳ ವಿವಿ ಸಭಾಂಗಣದಲ್ಲಿ ಕಿಡ್ನಿ ರೋಗ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಎಂ.ಕೆ.ಭಂಡಾರಿ ಆಸ್ಪತ್ರೆ ನಿರ್ದೇಶಕ ಡಾ.ಅನಿರುದ್ಧ ಕುಲಕರ್ಣಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ನಗರದ ಬಸವೇಶ್ವರ ವೃತ್ತದಿಂದ ಕೃಷಿ ವಿಜ್ಞಾನಗಳ ವಿವಿವರೆಗೆ ಜಾಗೃತಿ ನಡಿಗೆ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ತಜ್ಞ ಡಾ.ವಿನಯ ಬದ್ರಿ ಅವರು ಕಿಡ್ನಿ ಆರೋಗ್ಯ ಕಾಪಾಡುವ ಮಾಹಿತಿ ನೀಡಲಿದ್ದಾರೆ. ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ, ಎಸ್ಪಿ ಬಿ.ನಿಖಿಲ್, ವಿವಿ ಕುಲಪತಿ ಡಾ.ಹನುಮಂತಪ್ಪ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಭಂಡಾರಿ ಆಸ್ಪತ್ರೆ ಆಡಳಿತಾಧಿಕಾರಿ ಡಾ.ರಿಯಾಜುದ್ದೀನ್ ಮಾತನಾಡಿ, ಇತ್ತೀಚೆಗೆ ಕಿಡ್ನಿ ವೈಫಲ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅನೇಕರಿಗೆ ಡಯಾಲಿಸಿಸ್ ಮಾಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಕಿಡ್ನಿ ಆರೋಗ್ಯದ ಬಗ್ಗೆ ಜನರು ಕಾಳಜಿ ವಹಿಸಬೇಕಾಗಿದೆ ಎಂದು ಹೇಳಿದರು. ಆಸ್ಪತ್ರೆಯ ಜಮೀರ್, ಭಾಸ್ಕರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net