ಜಾನಪದ ಕಲೆ ಜನರ ಜೀವನಾಡಿ

28BK2
ಕರ್ನಾಟಕ ಜಾನಪದ ಪರಿಷತ್ ಬಸವಕಲ್ಯಾಣದ ತಾಲೂಕ ಘಟಕದಿಂದ ಬೇಟಬಾಲಕುಂದಾದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಜಾನಪದ ದಿನಾಚರಣೆಯನ್ನು ಡಾ.ಬಸವರಾಜ ಸ್ವಾಮಿ ಉದ್ಘಾಟಿಸಿದರು. ಬಸವರಾಜ ಗುಂಗೆ, ಬಸವರಾಜ ಖಂಡಾಳೆ, ಚಿದಾನಂದ ಗುಂಡೂರೆ, ಸುಧೀರ ಯಾದವ್, ನೌದಿತ್ ಸಿಂಧೆ, ಪ್ರಶಾಂತ ಬಡಗೆ ಇದ್ದರು.
Published on

ಬಸವಕಲ್ಯಾಣ: ಜಾನಪದ ಜನರ ಜೀವನಾಡಿಯಾಗಿದ್ದು, ಇದನ್ನು ಉಳಿಸುವ ಬೆಳೆಸುವ ಹೊಣೆಗಾರಿಕೆ ವಿದ್ಯಾವಂತರ ಮೇಲಿದೆ ಎಂದು ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಡಾ.ಬಸವರಾಜ ಸ್ವಾಮಿ ಹೇಳಿದರು.

ಕರ್ನಾಟಕ ಜಾನಪದ ಪರಿಷತ್ ತಾಲೂಕ ಘಟಕದಿಂದ ಬೇಟಬಾಲಕುಂದಾ ಗ್ರಾಮದ ಮನ್ಮಥಪ್ಪ ಖಂಡಾಳೆ ಮನೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಜಾನಪದ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಾನಪದ ಪ್ರಕೃತಿಯ ಸಹ ಜತೆಗೆ ಹೆಚ್ಚು ಒತ್ತು ನೀಡಿದೆ. ಜಾನಪದ ವೈದ್ಯ ಪದ್ಧತಿ ಸಂಪೂರ್ಣವಾಗಿ ಪ್ರಕೃತಿದತ್ತವಾದ್ದು, ಇದು ಕಾಲದಿಂದ ಕಾಲಕ್ಕೆ ಮೌಖಿಕ ಪರಂಪರೆಯಲ್ಲಿ ಜೀವಂತವಾಗಿದೆ ಎಂದರು.

ಶ್ರೀ ಬಸವೇಶ್ವರ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, ಜನರ ಜ್ಞಾನ, ಅರಿವು, ಆಚರಣೆಗಳ ಒಟ್ಟು ಮೊತ್ತ ಜಾನಪದವಾಗಿದೆ. ಮೌಖಿಕ ಪರಂಪರೆಯಲ್ಲಿಯ ಬಹುತ್ವದ ನೆಲೆಗಳು ಅರಿಯಲು ಜಾನಪದದ ಅಧ್ಯಯನ ಅವಶ್ಯಕ. ಲೋಕಜ್ಞಾನದ ಬಹುಮುಖಿ ಆಯಾಮದ ಅಧ್ಯಯನದಿಂದ ಜಾನಪದ ಬೆಳೆಸುವ ಕೆಲಸ ನಡೆಯಬೇಕಿದೆ ಎಂದರು.

ಹುಲಸೂರು ಕಸಾಪ ಕಾರ್ಯದರ್ಶಿ ಬಸವರಾಜ ಗುಂಗೆ ಮಾತನಾಡಿ, ಹಳ್ಳಿಗಳಲ್ಲಿ ಪ್ರದರ್ಶನ ಕಲೆ, ಹಾಡುಗಾರಿಕೆ, ಭಜನೆಗಳು ಆಧುನಿಕ ತಂತ್ರಜ್ಞಾನದ ರಭಸದಲ್ಲಿ ನಶಿಸಿ ಹೋಗುತ್ತಿವೆ. ಕನ್ನಡ ಮಾಧ್ಯಮ ಶಿಕ್ಷಣದಿಂದ ಕನ್ನಡ ಸಾಹಿತ್ಯ ಮತ್ತು ಜಾನಪದವನ್ನು ಉಳಿಸಬಹುದಾಗಿದೆ ಎಂದು ಹೇಳಿದರು.

ಕರ್ನಾಟಕ ಜಾನಪದ ಪರಿಷತ್ ಕಾರ್ಯದರ್ಶಿ ಡಾ.ಬಸವರಾಜ ಖಂಡಾಳೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.

ಮನ್ಮಥಪ್ಪ ಖಂಡಾಳೆ, ಚಿದಾನಂದ ಗುಂಡೂರೆ, ಸುಧೀರ್ ಯಾದವ್, ನೌದಿತ್ ಸಿಂಧೆ, ಡಾ.ಶಾಂತಲಾ ಪಾಟೀಲ್, ಸಚಿನ ಬಿಡುವೆ, ಶಿವಕಾಂತಾ ಉಪಾಸೆ ಇತರರಿದ್ದರು. ಗಂಗಾಧರ ಸಾಲಿಮಠ ಜನಪದ ಗೀತೆ ಹಾಗೂ ತತ್ವಪದಗಳನ್ನು ಹಾಡಿದರು.

ಪ್ರಶಾಂತ ಬಡಗೆ ವಂದಿಸಿದರು. ಚನ್ನಬಸಪ್ಪ ಶೆಟ್ಟೆಪ್ಪ ಗೌರ್ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net