

ಹುಬ್ಬಳ್ಳಿ : ವರಕವಿ ಬೇಂದ್ರೆಯವರಿಂದ ಯುಗದ ಕವಿ, ಜಗದ ಕವಿ ಎನಿಸಿಕೊಂಡು ವಿಶ್ವಮಾನವ ಸಂದೇಶವನ್ನು ನೀಡಿ, ಕನ್ನಡ ಸಾಹಿತ್ಯಕ್ಕೆ ಕಳಸ ಪ್ರಾಯದ ರೀತಿಯಲ್ಲಿ ಕೊಡುಗೆ ನೀಡಿದವರು ಕುವೆಂಪು ಅವರು ಎಂದು ಪ್ರಾಚಾರ್ಯ ರಾಮ ಮೋಹನ್ ಎಚ್.ಕೆ. ಹೇಳಿದರು.
ಇಲ್ಲಿನ ಗೋಕುಲ ರಸ್ತೆಯ ಎನ್.ಎಲ್.ಇ. ಸೊಸೈಟಿಯ ಡಾ. ಆರ್. ಬಿ. ಪಾಟೀಲ ಮಹೇಶ ಪದವಿ ಪೂರ್ವ ವಿಜ್ಞಾನ ಮಹಾ ವಿದ್ಯಾಲಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಕುವೆಂಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಅವರು ಮಾತನಾಡಿದರು.
ಮಲೆನಾಡಿನ ರಮ್ಮ ಪರಿಸರದಲ್ಲಿ ಜನ್ಮ ತಾಳಿದ ಕುವೆಂಪು ಅವರು, ಜನಪರ ಕಾಳಜಿಯ ಬರಹಗಾರರಾಗಿ ಗೋಚರಿಸಿದರು ಎಂದರು.
ಕನ್ನಡ ವಿಭಾಗದ ಮುಖ್ಯಸ್ಥ ಐ.ಎಸ್. ಹಿರೇಮಠ ಪ್ರಾಸ್ಥಾವಿಕವಾಗಿ ಮಾತನಾಡಿದರು. ವಿನಾಯಕ ಶಿರೂರ ಹಾಗೂ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಸಂಪತ್ತ ನಾರಾಯಣಪೂರ ಸ್ವಾಗತಿಸಿದರು. ಪ್ರತಿಕ ಪತ್ತಾರ ನಿರೂಪಿಸಿದರು. ವಿನೋದ ಪಾಟೀಲ ವಂದಿಸಿದರು