

ಕಾಳಗಿ: ವಿದ್ಯಾರ್ಥಿಗಳು ಶೈಕ್ಷಣಿಕ ಮತ್ತು ವೃತ್ತಿಗಳ ಮಾಹಿತಿ ಪಡೆದು ಹೆಚ್ಚು ಉದ್ಯೋಗಾವಕಾಶ ದೊರೆಯುವ ಕೋರ್ಸ್ ಆಯ್ಕೆ ಮಾಡಿಕೊಂಡರೆ ಉತ್ತಮ ಎಂದು ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ.ಬಾಬುರಾವ ಶೇರಿಕಾರ ಹೇಳಿದರು.
ಹೆಬ್ಬಾಳದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ಕರಿಯರ್ ಗೈಡನ್ಸ್ ಉಪನ್ಯಾಸ ಮತ್ತು ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಪಾಲಕರು ಮಕ್ಕಳ ಕೋರ್ಸ್ ನಿರ್ಧರಿಸಿ, ಅದೇ ಮಾಡಬೇಕೆಂಬ ಒತ್ತಡ ಸಲ್ಲದು. ವಿದ್ಯಾರ್ಥಿಗಳಿಗೆ ಎಲ್ಲ ಕೋರ್ಸ್ಗಳ ಮಹತ್ವ, ಉದ್ಯೋಗಾವಕಾಶಗಳ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಿ, ಆಯ್ಕೆ ಅವರಿಗೆ ನೀಡಬೇಕು ಎಂದು ಹೇಳಿದರು.
ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ. ಪಾಟೀಲ್, ಅಬಕಾರಿ ಇನ್ಸಸ್ಪೆಕ್ಟರ್ ಪ್ರಕಾಶ ಜಾಧವ್, ಯೋಧ ಶಂಕರಲಿಂಗ ತಳವಾರ ಮಾತನಾಡಿದರು.
ಪ್ರಮುಖರಾದ ಶಿವಯೋಗಪ್ಪ ಬಿರಾದಾರ, ಮಹಾದೇವಪ್ಪ ಬಿರಾದಾರ, ಚೇತನರೆಡ್ಡಿ ಶೇರಿಕಾರ, ಪ್ರಕಾಶಕುಮಾರ ರಾಠೋಡ್, ಶ್ರೀದೇವಿ ವಟವಟಿ, ಪ್ರದೀಪಕುಮಾರ ಪವಾಡಿ, ಸದಾಶಿವ ಹಿರೇಮಠ, ಮಹಾಲಿಂಗ, ಗಜಾನನ ನೀಲೂರ ಇತರರಿದ್ದರು.