

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿಶ್ವ ಹಿಂದಿ ದಿವಸ ನಿಮಿತ್ತ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಕರ್ನಾಟಕ ಧಾರವಾಡ ಪ್ರಾಂತದ ಸಭಾಭವನದಲ್ಲಿ ಶನಿವಾರ ವಿಶ್ವ ಹಿಂದಿ ದಿವಸ ಸಮಾರೋಹ ಸಮಾರಂಭ ಜರುಗಿತು.
ಐಐಟಿ ನಿವೃತ್ತ ನಿರ್ದೇಶಕ ಜೆ.ಎಸ್. ಭಟ್ಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತ ಸರ್ಕಾರ ಭಾರತದಲ್ಲಿ ಸಂರ್ಪೂಣವಾಗಿ ಹಿಂದಿ ಭಾಷೆಯನ್ನು ಅಳವಡಿಸುವ ಮೂಲಕ ರಾಷ್ಟ್ರೀಯ ಸಂಪರ್ಕ ಭಾಷೆಯಾಗಿ ಅಳವಡಿಸಿಕೊಂಡ ಸುದಿನವಿದು. ನಾವೆಲ್ಲರೂ ಹಿಂದಿ ಭಾಷೆ ಕಲಿಯುವ ಮೂಲಕ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಕೊಡುಗೆ ನೀಡಬಹುದು ಎಂದರು.
ಅತಿಥಿಗಳಾಗಿ ಮಾಜಿ ಮೇಯರ್ ಈರೇಶ ಅಂಚಟಗೇರಿ, ರಾಘವೇಂದ್ರ ತವನಪ್ಪನವರ, ಜಗದೀಶ ಮಳಗಿ, ರಾಧಾಕೃಷ್ಣನ್, ಹರ್ಷ ಡಂಬಳ, ಎಸ್.ವಿ. ಯಕ್ಕುಂಡಿಮಠ, ಜಿ.ಜಿ. ಹಿರೇಮಠ, ಉಮಾ ಚವ್ಹಾಣ, ಕವಿತಾ, ಶಿಕ್ಷಕರು, ಇತರರು ಇದ್ದರು.