ಭಾರತದ ಮಣ್ಣಿಗೆ ವಿಶ್ವ ಪರಂಪರೆಯ ಗುಣ

30-MDG-2P1
Published on

ಮೂಡಿಗೆರೆ: ಜ್ಞಾನದಲ್ಲಿ ಭಾರತವನ್ನು ಮೀರಿಸುವವರು, ಭಾರತದಷ್ಟು ಜ್ಞಾನವಂತರೂ ಎಲ್ಲೂ ಇಲ್ಲ ಎಂದು ವಜ್ರದೇಹಿ ಮಠದ ರಾಜಶೇಖರನಂದಾ ಸ್ವಾಮೀಜಿ ತಿಳಿಸಿದರು.

ಜನ್ನಾಪುರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ವಿವಿಧ ಸಂಘ ಸಂಸ್ಥೆಗಳಿಂದ ನಡೆದ ಸಮೂಹಿಕ ಸತ್ಯನಾರಾಯಣ ಪೂಜೆ ಮುತ್ತು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅರ್ಶಿವಚನ ನೀಡಿ, ಭಾರತದ ಮಣ್ಣಿಗೆ ವಿಶ್ವ ಪರಂಪರೆಯ ಗುಣವಿದೆ. ಬಲಕೈಯಲ್ಲಿ ಕೊಟ್ಟಿದ್ದು ಎಡಕೈಗೆ ತಿಳಿಯಬಾರದು ಎಂಬಂತೆ ನಮ್ಮಲ್ಲಿ ಧರ್ಮಕ್ಕೆ ಹೆಚ್ಚಿನ ಮಹತ್ವವಿದೆ. ನಮ್ಮ ಒಳಗಿನವರನ್ನು ಮರೆತು ಅಪರಿಚಿತರನ್ನು ನಂಬಿದಾಗ ಅಘಾತ ನಿಶ್ಚಿತ, ಹಿಂದಿನ ತಲೆಮಾರಿನವರು ಸಮಾಜದಲ್ಲಿ ನಿಷ್ಕಲ್ಮಶ ಗುಣಹೊಂದಿದ್ದರು. ಹಿರಿಯರ ಶ್ರೀರಕ್ಷೆಯಿಂದಾಗಿ ನಾವೆಲ್ಲರೂ ಉತ್ತಮ ಮಾರ್ಗದಲ್ಲಿ ನಡೆಯುವಂತಾಗಿದೆ ಎಂದರು.

ಧರ್ಮಸ್ಥಳದ ಪ್ರಮುಖ ಯೋಜನೆಗಳನ್ನು ಎಲ್ಲರೂ ತಿಳಿದುಕೊಳ್ಳಬೇಕು. ನಮ್ಮ ಸುತ್ತ ಮುತ್ತಲ ದೇಶಗಳು, ಧರ್ಮಭ್ರಷ್ಟರಾಗಿ ಅದೋಗತಿಗೆ ತಲುಪುವ ಪರಿಸ್ಥಿತಿ ಬಂದಿವೆ. ನಾವು ಕೃಷ್ಣ, ರಾಮನ ಭಕ್ತಿ ಮೂಲಕ ದೇಶ ಉಳಿಸಬೇಕಿದೆ. ದೇವರು ಎಂಬ ಸೂಕ್ಷ ಅರಿತು ದೇಶ ಎಂಬ ಭಕ್ತಿ ಬೆಳೆಸೋಣ, ಧರ್ಮಸ್ಥಳದ ಯೋಜನೆ ಮಹಿಳೆಯರನ್ನ ಸ್ವಾವಲಂಬಿಗಳನ್ನಾಗಿ ಮಾಡುವ ಮೂಲಕ ಸಮಾಜವನ್ನು ಬೆಳೆಸುತ್ತಿದೆ. ನಿಸ್ವಾರ್ಥ ಸೇವೆ ಮೂಲಕ ಸ್ವಾರ್ಥವನ್ನು ನಾಶಪಡಿಸೋಣ ಎಂದರು.

ಜೆ.ಎಸ್.ರಘು, ಧರ್ಮಸ್ಥಳ ಧರ್ಮೋತ್ತಾನ ಟ್ರಸ್ಟ್ ಸದಸ್ಯ ಪ್ರಶಾಂತ್ ಚಿಪ್ರಗುತ್ತಿ, ಜನಜಾಗೃತಿ ವೇದಿಕೆ ಸದಸ್ಯ ನಯನ ತಳವಾರ, ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಮುಖ್ಯಸ್ಥ ಪಿ.ಶಿವಾನಂದ, ದೀಪಕ್ ದೊಡ್ಡಯ್ಯ, ಗೀರಿಶ್, ಸುನಿಲ್ ಕುಮಾರ್, ರಾಮಚಂದ್ರಗೌಡ, ಎಂ.ಸಿ.ಅದರ್ಶ, ಭರತ್, ರಾಮಚಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net