

ಹುಬ್ಬಳ್ಳಿ: ಇಲ್ಲಿಯ ಹೊಸೂರಿನ ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನ, ಏಕಸ್ ಪ್ರತಿಷ್ಠಾನ ಮತ್ತು ಶಾಲಾ ಶಿಕ್ಷಣ ಇಲಾಖೆಯ ಸಹಯೋಗದ ಅನುಸೂಯಾ ಮೆಳ್ಳಿಗೇರಿ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರದಲ್ಲಿ ಏರ್ಪಡಿಸಿರುವ ಉಚಿತ ಚಳಿಗಾಲ ಶಿಬಿರದಲ್ಲಿ ಸೋಮವಾರ ವಿಶ್ವ ಹದಯ ದಿನ ಆಚರಿಸಲಾಯಿತು.
ಅಗಸ್ತ್ಯ ಪ್ರತಿಷ್ಠಾನದ ವಲಯ ಮುಖ್ಯಸ್ಥ ಶಿವಾನಂದ ಚಲವಾದಿ ಮಾತನಾಡಿ, ಹದಯ ದಿನವನ್ನು ಪ್ರತಿವರ್ಷ ಸೆ. 29ರಂದು ವಿಶ್ವ ಹೃದಯ ಒಕ್ಕೂಟದ (ವರ್ಡ್ ಹಾರ್ಟ್ ಫೆಡರೇಶನ್) ಅಡಿಯಲ್ಲಿ ಆಚರಿಸಲಾಗುತ್ತದೆ. ಈ ವರ್ಷದ ಘೋಷವಾಕ್ಯ "ಒಂದು ಬಡಿತ ಕೂಡಾ ತಪಿಸಕೊಳ್ಳಬೇಡಿ' (ಡೋಂಟ್ ಮಿಸ್ ಎ ಬೀಟ್) ಎಂಬುದಾಗಿದೆ. ನಮ್ಮ ದೇಹವನ್ನು ಆರೋಗ್ಯಕರವಾಗಿಟ್ಟುಕೊಳ್ಳಲು ಪ್ರತಿದಿನ ವ್ಯಾಯಾಮ, ಪೋಷಕಾಂಶಯುಕ್ತ ಆಹಾರ ಸೇವಿಸಬೇಕು ಎಂದರು.
ವಿದ್ಯಾರ್ಥಿಗಳು ಕಾಗದದಿಂದ ಹೃದಯದ ಮಾದರಿ ನಿರ್ಮಿಸಿ ಮಾಹಿತಿ ಪಡೆದರು. ಗೋಕುಲ ಮತ್ತು ಅದರಗುಂಚಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮಾರ್ಗದರ್ಶಿ ಶಿಕ್ಷಕರಾದ ಫಕ್ಕೀರೇಶ್ವರ ಮಡಿವಾಳರ, ಪ್ರಶಾಂತ ಅಮೃತಯ್ಯನವರ, ಗೌರಿ ಬಟ್ಟೂರ, ಚೈತ್ರಾ ಸುಣಗಾರ, ಶ್ರೀದೇವಿ ಕೊಪ್ಪದ ಉಪಸ್ಥಿತರಿದ್ದರು.