ಗದಗ: ವಿಶ್ವ ಹೃದಯ ದಿನಾಚರಣೆ

Heart Day
Published on

ಗದಗ: ಶುಕ್ರವಾರದಂದು ವಿಶ್ವ ಹೃದಯ ದಿನದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಮೀಕ್ಷಾ ಘಟಕ, ಜಿಲ್ಲಾ ಅಸಾಂಕ್ರಾಮಿಕ ರೋಗಗಳ ಘಟಕ, ತಾಲೂಕ ಆರೋಗ್ಯ ಅಧಿಕಾರಿಗಳ ಕಛೇರಿ ವತಿಯಿಂದ ಗದಗ-ಬೆಟಗೇರಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆಶಾ ಕಾರ್ಯಕರ್ತೆಯರಿಗೆ ವಿಶ್ವ ಹೃದಯ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು.

ಗದಗ ತಾಲೂಕಾ ಆರೋಗ್ಯಾಧಿಕಾರಿ ಡಾ. ಪ್ರೀತ ಖೋನಾ ಅವರು ಮಾತನಾಡಿ ಹೃದಯ ನಮ್ಮ ದೇಹಕ್ಕೆ ಬಹಳ ಪ್ರಮುಖ ಅಂಗವಾಗಿದ್ದು  ನಮ್ಮ ದೇಹದ ಪ್ರತಿಯೊಂದು ಅಂಗಗÀಳಿಗೆ ರಕ್ತ ಆಕ್ಸಿಜನ್ ಪೂರೈಸುವುದರ ಮೂಲಕ ಎಲ್ಲ ಅಂಗಳ ಆರೋಗ್ಯಯುತವಾಗಿರಿಸಲು ಕಾರಣವಾಗಿರುತ್ತದೆ. ಪ್ರಸ್ತುತ ನಮ್ಮ ಜೀವನ ಶೈಲಿ, ಆಹಾರ ಪದ್ಧತಿ, ತಂಬಾಕು ಉತ್ಪನ್ನಗಳ ಸೇವನೆಯಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿದ್ದು,  ಇದನ್ನು ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲಿದೆ. ನಾವು ಆರೋಗ್ಯಯುತವಾಗಿರುವುದೇ ಈ ಸಮಾಜಕ್ಕೆ ನೀಡುವ ಕೊಡುಗೆ ಎಂದು ತಿಳಿಸಿದರು.

ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ವೆಂಕಟೇಶ ರಾಠೋಡ ಅವರು ಮಾತನಾಡಿ ವಿಶ್ವ ಹೃದಯ ದಿನಾಚರಣೆ ಈ ವರ್ಷದ ಘೋಷವಾಖ್ಯೆ   Use Heart Know Heart  ಆಗಿದ್ದು, ಅಸಾಂಕ್ರಾಮಿಕ ರೋಗಗಳನ್ನು ಪ್ರಾರಂಭಿಕ ಹಂತದಲ್ಲಿ ಪತ್ತೆ ಹಚ್ಚುವುದು ಬಹಳ ಪ್ರಮುಖವಾಗಿದ್ದು, ಸಾಕಷ್ಟು ಸಾವು ನೋವುಗಳನ್ನು ತಡೆಗಟ್ಟಬಹುದು, ಬಹಳಷ್ಟು ಜನರಿಗೆ ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಅರಿವು ಇರದಿರುವುದರಿಂದ 30 ವರ್ಷ ಮೇಲ್ಪಟ್ಟವರು ವರ್ಷಕ್ಕೆ ಕನಿಷ್ಟ ಒಂದು ಬಾರಿ ಮಧುಮೇಹ ಹಾಗೂ ರಕ್ತದೊತ್ತಡ ತಪಾಸಣೆಯನ್ನು ಮಾಡಿಸುವುದು ಸೂಕ್ತವೆಂದು ತಿಳಿಸಿದರು. ವಿಶ್ವದಲ್ಲಿ ಒಂದು ವರ್ಷದಲ್ಲಿ ಸರಿಸುಮಾರು 14 ಕೋಟಿ ಜನನ, 6 ಕೋಟಿ ಮರಣ ಹೊಂದುತ್ತಿದ್ದು, ಇದರಲ್ಲಿ 4 ಕೋಟಿ ಜನ ಅಸಾಂಕ್ರಾಮಿಕ ಕಾಯಿಲೆಗಳಿಂದ ಮರಣ ಹೊಂದುತ್ತಿದ್ದಾರೆ. ಈ ಅಸಾಂಕ್ರಾಮಿಕ ಕಾಯಿಲೆಗಳಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ ಅತಿ ಹೆಚ್ಚು ಜನ ಮರಣ ಹೊಂದುತ್ತಿದ್ದಾರೆ. ಅದೇ ರೀತಿ ಭಾರತದಲ್ಲಿ ಒಂದು ವರ್ಷದಲ್ಲಿ ಸರಿಸುಮಾರು 2.5 ಕೋಟಿ ಜನನ, 1 ಕೋಟಿ ಮರಣ ಹೊಂದುತ್ತಿದ್ದು, ಇದರಲ್ಲಿ 67 ಲಕ್ಷ ಜನ ಅಸಾಂಕ್ರಾಮಿಕ ಕಾಯಿಲೆಗಳಿಂದ ಮರಣ ಹೊಂದುತ್ತಿದ್ದಾರೆ. ನಮ್ಮ ದೇಶದಲ್ಲಿ 1 ಸಾವಿರ ಜನಸಂಖ್ಯೆಯಲ್ಲಿ 37ಜನ ಹೃದಯ ಸಂಬಂಧಿ ಕಾಯಿಲೆಯಿಂದ, 159 ಜನ ರಕ್ತದೊತ್ತಡದಿಂದ, 67ಜನ ಮಧುಮೇಹದಿಂದ, ಪಾಶ್ರ್ವವಾಯು, ಕ್ಯಾನ್ಸರ್‍ನಿಂದ ಇಬ್ಬರು ಬಳಲುತ್ತಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೂಪಸೇನ ಚವ್ಹಾಣ, ಜಿಲ್ಲಾ ಕಾರ್ಯಕ್ರಮ ಸಂಯೋಜಕರಾದ ಡಾ.ರವಿ ಕಡಗಾವಿ, ಜಿಲ್ಲಾ ಎಪಿಡೆಮಿಯೋಲಾಜಿಸ್ಟ್ ಡಾ ಪ್ರವೀಣ ನಿಡಗುಂದಿ, ಜಿಲ್ಲಾ ತಂಬಾಕು ನಿಯಂತ್ರಣಕೋಶದ ಸಲಹೆಗಾರರಾದ   ಗೋಪಾಲ ಸುರಪುರ ಹಾಗೂ ಜಿಲ್ಲಾ ಸಮೀಕ್ಷಣಾ ಘಟಕದ ಎಲ್ಲ ಸಿಬ್ಬಂದಿಯವರು ಹಾಜರಿದ್ದರು.  ರಮೇಶ ಅರಹುಣಸಿ  ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net