ಕಠಿಣ ಪರಿಶ್ರಮಕ್ಕೆ ಸಮನಾದ ಸಿರಿವಂತಿಕೆ ಇಲ್ಲ: ನಿವೃತ್ತ ಪ್ರಾದೇಶಿಕ ನಿರ್ದೇಶಕ ಎಂ.ಎನ್.ನಟರಾಜು ಅಭಿಮತ

World Folk Day Mandya
Published on

ಮಂಡ್ಯ: ಕಠಿಣ ಪರಿಶ್ರಮಕ್ಕೆ ಸರಿಸಮನಾದ ಸಿರಿವಂತಿಕೆಯಿಲ್ಲ. ಶ್ರಮದಿಂದ ಸಿಗುವ ಸಂಪತ್ತು ಶ್ರೇಷ್ಠ ಎಂದು ನೆಹರು ಯುವ ಕೇಂದ್ರದ ನಿವೃತ್ತ ಪ್ರಾದೇಶಿಕ ನಿರ್ದೇಶಕ ಎಂ.ಎನ್.ನಟರಾಜು ತಿಳಿಸಿದರು.

ತಾಲೂಕಿನ ದುದ್ದ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲೆಯಲ್ಲಿ ಜಾನಪದ ಪರಿಷತ್ ಮಂಡ್ಯ ತಾಲೂಕು ಘಟಕದಿಂದ ಆಯೋಜಿಸಿದ್ದ ‘ವಿಶ್ವ ಜಾನಪದ ದಿನ’ ಹಾಗೂ ‘ವಿದ್ಯಾರ್ಥಿಗಳತ್ತ ಜಾನಪದ’ ಸರಣಿ-3 ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ನೆಹರು ಯುವ ಕೇಂದ್ರ ಅನೇಕ ಯುವಕರನ್ನು ನಾಯಕರನ್ನಾಗಿ ಮಾಡಿದೆ. ಸಮಾಜಕ್ಕೆ ನಾವು ಏನನ್ನು ಕೊಡುತ್ತೇವೋ ಅದೇ ಸಮಾಜದಿಂದ ನಮಗೆ ವಾಪಸ್ ಸಿಗುತ್ತದೆ ಎಂದು ತಿಳಿವಳಿಕೆ ನೀಡಿದರು.

ಪತ್ರಕರ್ತ ದ.ಕೋ ಹಳ್ಳಿ ಚಂದ್ರಶೇಖರ್ ಮಾತನಾಡಿ, ಜನಪದ ಹಾಡುಗಳು, ಕ್ರೀಡೆ, ಉಡುಗೆ ಎಲ್ಲವೂ ಕೃಷಿ ಮೂಲದಿಂದ ಬಂದವು. ಜನಪದದಲ್ಲಿ ಭವಿಷ್ಯದ ಬೆಳಕಿದೆ,ಅದು ನಮ್ಮ ಬದುಕಿನ ಭಾಗವಾಗಬೇಕು ಎಂದರು.

ಕಾವೇರಿ ನೀರಾವರಿ ನಿಗಮದ ಕಿರಿಯ ಇಂಜಿನಿಯರ್ ಜಿ.ಎನ್.ಕೆಂಪರಾಜು ಮಾತನಾಡಿದರು. ಅಧ್ಯಕ್ಷತೆಯನ್ನು ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಿ.ಪಿ.ಸ್ವಾಮಿ ವಹಿಸಿದ್ದರು. ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್ ಅಧ್ಯಕ್ಷ ಎ.ಸಿ.ರಮೇಶ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಶೀಲ್ ಕುಮಾರ್, ಪರಿಷತ್ ತಾಲೂಕು ಅಧ್ಯಕ್ಷ ಕಾರಸವಾಡಿ ಮಹದೇವು, ಪ್ರಧಾನ ಕಾರ್ಯದರ್ಶಿ ಹನಿಯಂಬಾಡಿ ಶೇಖರ್, ಜಿಲ್ಲಾ ಯುವ ಪರಿಷತ್ ಪ್ರಧಾನ ಕಾರ್ಯದರ್ಶಿ ಸುಕನ್ಯಾ ನಾಗರಾಜ್, ಪ್ರಾಂಶುಪಾಲೆ ವೀಣಾ, ಉಪ ಪ್ರಾಂಶುಪಾಲ ಎಸ್.ಡಿ.ಬಸವರಾಜು, ಕೀಲಾರ ಕೃಷ್ಣೇಗೌಡ, ಮಂಗಲ ಲಂಕೇಶ್, ವೈರಮುಡಿ ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ನಡೆದ ಜಾನಪದ ಗೀತ ಗಾಯನ ಸ್ಪರ್ಧೆಯಲ್ಲಿ ಪರಿಷತ್ ತಾಲೂಕು ಘಟಕದ ಉಪಾಧ್ಯಕ್ಷ ಡಿ.ದೇವರಾಜ್ ಕೊಪ್ಪ, ಎಚ್.ಮಲ್ಲಿಗೆರೆ ರಾಜುಸ್ವಾಮಿ, ಕೀಲಾರ ಮುದ್ದಪ್ಪ, ಪಾವನಿ ತೀರ್ಪುಗಾರರಾಗಿ ಭಾಗವಹಿಸಿದ್ದರು. ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಪ್ರಾಯೋಜನೆಯಲ್ಲಿ ಹಿರಿಯ ಕಲಾವಿದರಿಂದ ಜನಪದ ಗೀತ ಗಾಯನ ನಡೆಯಿತು. ನೆಹರು ಯುವ ಕೇಂದ್ರ ನಿವೃತ್ತ ಲೆಕ್ಕಾಧಿಕಾರಿಗಳಾದ ಚಿಂದಗಿರಿಗೌಡ, ಬಸವರಾಜು, ಜಾನಪದ ಅಕಾಡೆಮಿ ಸದಸ್ಯರಾದ ಡಾ.ಎಂ.ಕೆಂಪಮ್ಮ, ಮಂಜೇಶ್‌ಗೌಡ ಅವರನ್ನು ಅಭಿನಂದಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net