

ಗಂಗೊಳ್ಳಿ: ತಲ್ಲೂರಿನ ಸಂತ ಫ್ರಾನ್ಸಿಸ್ ಆಸಿಸ್ಸಿ ಚರ್ಚ್‌ನಲ್ಲಿ ಕುಟುಂಬ ಆಯೋಗದಿಂದ ವಿಶ್ವ ಅಪ್ಪಂದಿರ ದಿನ ಭಾನುವಾರ ಆಚರಿಸಲಾಯಿತು. ಚರ್ಚ್ ಧರ್ಮಗುರು ಎಡ್ವಿನ್ ಡಿಸೋಜ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ಉಡುಪಿ ಧರ್ಮ ಪ್ರಾಂತ್ಯದ ಕುಟುಂಬ ಆಯೋಗ ನಿರ್ದೇಶಕ ಲೆಸ್ಲಿ ಆರೋಜ ಕುಟುಂಬದಲ್ಲಿ ತಂದೆಗೆ ಇರುವ ಸ್ಥಾನಮಾನ ಮತ್ತು ಮಹತ್ವ ವಿವರಿಸಿದರು. 90 ಮಂದಿ ಅಪ್ಪಂದಿರನ್ನು ಅಭಿನಂದಿಸಿ ಗೌರವಿಸಿದರು. ಕುಟುಂಬ ಆಯೋಗದ ಸಂಚಾಲಕ ರಾಜೇಶ್ ಮೆಂಡೋನ್ಸಾ ವಂದಿಸಿದರು. ಜೋನಿಟಾ ಮೆಂಡೋನ್ಸಾ ನಿರೂಪಿಸಿದರು.