ಗಿಡ ಬೆಳೆಸಿ ನಾಡು ಉಳಿಸಿ

5 HBD 2
ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಹುಮನಾಬಾದ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಬುಧವಾರ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಸಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಗಿರೀಶ ತುಂಬಾ, ಗೋಪಾಲಕೃಷ್ಣ ಮೋಹಾಳೆ, ಜಗನಾಥ ಪಾಟೀಲ್, ಡಿ.ಎನ್.ಪತ್ರಿ, ಗೋವಿಂದ ಚವ್ಹಾಣ್, ಮಲ್ಲಿಕಾರ್ಜುನ ಸೀಗಿ ಇತರರಿದ್ದರು.
Published on

ಹುಮನಾಬಾದ್: ಪರಿಸರ ನಾಶದಿಂದ ವ್ಯಾಪಕ ದುಷ್ಪರಿಣಾಮಗಳು ಉಂಟಾಗುತ್ತಿರುವುದನ್ನು ತಡೆಗಟ್ಟಲು ಪರಿಸರ ರಕ್ಷಣೆಗೆ ಎಲ್ಲರೂ ಮುಂದಾಗಬೇಕೆಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಕರೆ ನೀಡಿದರು.

ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಬುಧವಾರ ಸಸಿ ನೆಟ್ಟು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಯ ಪರಿಸರದಲ್ಲಿ ಸಸಿಗಳನ್ನು ನೆಟ್ಟು ಜಾಗೃತಿ ಮೂಡಿಸಲು ಶ್ರಮಿಸಬೇಕು. ಪ್ರತಿಯೊಬ್ಬರು ಮರಗಳನ್ನು ಬೆಳೆಸಿ ಸಂರಕ್ಷಿಸಿ. ಕಾಡು ಇದ್ದರೆ ನಾಡು. ನಿಮ್ಮ ಮನೆ, ಕಚೇರಿ ಆವರಣ ಹಾಗೂ ಇತರೆ ಜಾಗಗಳಲ್ಲಿ ಸಸಿಗಳನ್ನು ನೆಟ್ಟು, ಅದರ ಬೆಳವಣಿಗೆ ಮತ್ತು ಸಂರಕ್ಷಣೆ ಬಗ್ಗೆ ಕಾಳಜಿ ವಹಿಸಿ. ನಮ್ಮ ಮುಂದಿನ ಪೀಳಿಗೆಗೂ ಸ್ವಚ್ಛ ಹಾಗೂ ಆರೋಗ್ಯಕರ ಪರಿಸರವನ್ನು ಕಾಯ್ದಿರಿಸೋಣ ಎಂದರು.

ಪ್ರಾಚಾರ್ಯ ಜಯಕುಮಾರ ಸಿಂಧೆ, ಸಿಬ್ಬಂದಿ ಸಂಪತಕುಮಾರ ಮಲ್ಕಾಪುರೆ, ಅಂಬರೀಷ ಕನೇರಿ, ವೀರೇಶ ಹಳೇಮನೆ, ಶಾಂತಕುಮಾರ, ವಿಶಾಲ ಸ್ವಾಮಿ, ಬಿಜೆಪಿ ಮುಖಂಡರಾದ ಗಿರೀಶ ತುಂಬಾ, ಗೋಪಾಲಕೃಷ್ಣ ಮೋಹಾಳೆ , ಜಗನಾಥ ಪಾಟೀಲ್, ಡಿ.ಎನ್.ಪತ್ರಿ, ಗೋವಿಂದ ಚವ್ಹಾಣ್, ಮಲ್ಲಿಕಾರ್ಜುನ ಸೀಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net