ಪರಿಸರ ಸಂರಕ್ಷಣೆ ಕಾರ್ಯಕ್ಕೆ ಕೈಜೋಡಿಸಿ

5BK5
ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಬಸವಕಲ್ಯಾಣದ ಐಡಿಯಲ್ ಶಿಕ್ಷಣ ಸಂಸ್ಥೆಯಿಂದ ತ್ರಿಪುರಾಂತ ಕೆರೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಸಸಿಗೆ ನೀರೆರೆಯುವ ಮೂಲಕ ಪೌರಾಯುಕ್ತ ರಾಜು ಬಣಕರ ಚಾಲನೆ ನೀಡಿದರು. ಶ್ರೀ ಡಾ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಮುಜಾಹಿದ್ ಪಾಶಾ ಖುರೇಶಿ, ಆರ್‌ಎಫ್‌ಒ ಐಶ್ವರ್ಯ ಗೊಬ್ಬೂರ, ಸಂತೋಷಕುಮಾರ ಯಾಚೆ, ಮನೋಜ ಕಾಂಬಳೆ, ಎಇಇ ಶಿವಶರಣಪ್ಪಾ ಸಜ್ಜನಶೆಟ್ಟಿ, ಶಾಂತಲಿAಗ ಮಠಪತಿ ಇತರರಿದ್ದರು.
Published on

ಬಸವಕಲ್ಯಾಣ: ಆನಂದದ ಜೀವನಕ್ಕಾಗಿ ಪ್ರತಿಯೊಬ್ಬರೂ ಐದು ಸಸಿಗಳನ್ನು ನೆಡೆವ ಜತೆಗೆ ಕಾಳಜಿಯಿಂದ ಬೆಳೆಸಬೇಕು. ಪರಿಸರ ಸಂರಕ್ಷಣೆ ಕಾರ್ಯಕ್ಕೆ ಕೈಜೋಡಿಸಬೇಕು. ಅಂದಾಗ ಮಾತ್ರ ಭವಿಷ್ಯದಲ್ಲಿ ಪರಿಸರ ಸಮತೋಲನೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಗವಿಮಠ ಸಂಸ್ಥಾನದ ಶ್ರೀ ಡಾ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ನುಡಿದರು.

ವಿಶ್ವ ಪರಿಸರ ದಿನಾಚರಣೆ ನಿಮಿತ್ತ ನಗರದ ಐಡಿಯಲ್ ಶಿಕ್ಷಣ ಸಂಸ್ಥೆಯ ಶಾಲಾ-ಕಾಲೇಜು, ತಾಲೂಕು ಕನ್ನಡ ಸಾಹಿತ್ಯ ಪರಿಷತ್, ನಗರಸಭೆ, ಪೊಲೀಸ್, ಶಿಕ್ಷಣ, ಅರಣ್ಯ ಇಲಾಖೆ ಸಹಯೋಗದಲ್ಲಿ ಐತಿಹಾಸಿಕ ತ್ರಿಪುರಾಂತ ಕೆರೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕೆರೆ ಸ್ವಚ್ಛತೆ ಹಾಗೂ ಸಸಿ ನೆಡುವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಶೆಲ್ಫಿ ಫೋಟೋಗಾಗಿ ಸ್ವಚ್ಛತೆ ನಡೆಯಬಾರದು, ಪ್ರಾಮಾಣಿಕವಾಗಿ ಸ್ವಚ್ಛತೆ ಕಾರ್ಯನಡೆಯಬೇಕು. ಪರಿಸರ ಕಾಳಜಿಯಿಂದ ಐಡಿಯಲ್ ಸಂಸ್ಥೆ ಕೆರೆ ಸ್ವಚ್ಛತೆಯ ಜತೆಗೆ ಪರಿಸರ ಕುರಿತು ಜಾಗೃತಿ ಮೂಡಿಸುವ ಮತ್ತು ಪ್ರೋತ್ಸಾಹಿಸುವ ಆಶಯದೊಂದಿಗೆ ವಿವಿಧ ಕಾರ್ಯಕ್ರಮಗಳು ಹಮ್ಮಿಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಗರಸಭೆ ಪೌರಾಯುಕ್ತ ರಾಜು ಬಣಕರ್ ಮಾತನಾಡಿ, ಪರಿಸರ ಸಂರಕ್ಷಣೆ, ನಗರ ಸ್ವಚ್ಛತೆ ನಗರ ಸಭೆಯವರ ಕಾರ್ಯ ಎನ್ನುವ ಭಾವವನೆ ಸರಿಯಲ್ಲ. ಈ ಕಾರ್ಯಕ್ಕೆ ಕೈಜೋಡಿಸುವುದು ಎಲ್ಲ ನಾಗರಿಕರ ಕರ್ತವ್ಯವೂ ಆಗಿದೆ ಎಂದರು.

ಐಡಿಯಲ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮುಜಾಹಿದ್ ಪಾಶಾ ಖುರೇಶಿ ಮಾತನಾಡಿ, ಕರೆಯ ಸ್ವಚ್ಛತೆ ಜತೆಗೆ ಪರಿಸರ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಐತಿಹಾಸಿಕ ತ್ರಿಪುರಾಂತ ಕೆರೆಯ ಸ್ವಚ್ಛತೆಯ ಜತೆಗೆ ಕೆರೆಯ ದಡೆಯ ಮೇಲೆ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪರಿಸರ ಸಂರಕ್ಷಣೆಯ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.

ಆರ್‌ಎಫ್‌ಒ ಐಶ್ವರ್ಯ ಗೊಬ್ಬೂರ ಮಾತನಾಡಿದರು. ಸಂಸ್ಥೆ ಸದಸ್ಯ ಮುಕ್ತದೀರ್ ಉಮರ್ ಪ್ರಾಸ್ತಾವಿಕ ಮಾತನಾಡಿದರು. ಆರ್‌ಎಫ್‌ಒ ಕರೆಪ್ಪ ಪೂಜಾರಿ, ಪಿಎಸ್‌ಐ ಸುವರ್ಣ ಮಲಶೆಟ್ಟಿ, ಎಆರ್‌ಎಫ್‌ಒ ಸಂತೋಷಕುಮಾರ ಯಾಚೆ, ನಗರಸಭೆ ಪರಿಸರ ಅಭಿಯಂತರ ಮನೋಜ ಕಾಂಬಳೆ, ಎಇಇ ಶಿವಶರಣಪ್ಪಾ ಸಜ್ಜನಶೆಟ್ಟಿ, ನಿತ್ಯಾನಂದ ಜಮಾದಾರ, ಕಸಾಪ ತಾಲೂಕು ಅಧ್ಯಕ್ಷ ಶಾಂತಲಿಂಗ ಮಠಪತಿ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮೀರ್ ವಾರೀಸ್ ಅಲಿ, ಸಿಆರ್‌ಸಿ ನಾಸೀರ್ ಪಟೇಲ್, ಗಿರಿಧರ, ಪ್ರಾಚಾರ್ಯರಾದ ನರೇಂದ್ರಕುಮಾರ, ಪ್ರಾಚಾರ್ಯ ಬಾಸಿಲ್ ಆಜಾದ್, ಫರಹಾರ್, ಪ್ರಭಾ ನೌಗಿರೆ, ಶಿವಕುಮಾರ, ಸತೀಶ ಬೇಲಕಟ್ಟೆ, ರೂಪಾ ಪಂಚಾಳ, ಸುಮಿತ್ರಾ ಘಾಳೆ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶ್ರೇಯಾ ಮಠಪತಿ ಸ್ವಾಗತಿಸಿದರು. ಅಬ್ದುಲ್ ಮಾಜಿದ್ ವಂದಿಸಿದರು. ರಾಜಕುಮಾರ ರಾಠೋಡ್ ನಿರೂಪಣೆ ಮಾಡಿದರು.

ಪರಿಸರ ಅಸಮತೋಲದಿಂದ ಪ್ರತಿಕೂಲ ಪರಿಣಾಮ ಎದುರಿಸಬೇಕಾಗುತ್ತದೆ. ಹೀಗಾಗಿ ಸಸಿಗಳನ್ನು ನೆಟ್ಟು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆ ಮಾಡುವುದು ಎಲ್ಲರ ಜವಾಬ್ದಾರಿಯಾಗಿದೆ. ನೈಸರ್ಗಿಕ ಸಂಪನ್ಮೂಲಗಳಾದ ಮಣ್ಣು, ನೀರು, ಗಾಳಿ ಸಂರಕ್ಷಣೆಯ ಬಗ್ಗೆ ಕಾಳಜಿ ಅವಶ್ಯಕ. ಸಸಿಗಳನ್ನು ನೆಡುವ ಜತೆಗೆ ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು.
| ಐಶ್ವರ್ಯ ಗೊಬ್ಬೂರ ಆರ್‌ಎಫ್‌ಒ ಬಸವಕಲ್ಯಾಣ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net