ಪರಿಸರ ಬಳಗದ ಸದಸ್ಯರಿಂದ ವಿಶ್ವ ಪರಿಸರ ದಿನಾಚರಣೆ

5
Published on

ನಗರದ ಆಲನಹಳ್ಳಿ ಬಡಾವಣೆಯ ಶ್ರೀ ಬಸವೇಶ್ವರ ಉದ್ಯಾನವನದಲ್ಲಿ ಭಾನುವಾರ ಪರಿಸರ ಬಳಗದ ಸದಸ್ಯರು ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಿಸಿದರು.

ಉಪ ಮೇಯರ್ ಡಾ.ಜಿ.ರೂಪಾ ಅವರು ಪ್ಲಾಸ್ಟಿಕ್ ಬಳಕೆಯ ಅಪಾಯಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಪ್ಲಾಸ್ಟಿಕ್ ಬಳಕೆ ನಿಯಂತ್ರಣ ಮಾಡಿ ಪರಿಸರ ಉಳಿಸಿಕೊಳ್ಳಲು ಜನರು ಸಹಕರಿಸಿಬೇಕು ಎಂದು ಕೋರಿದರು.

ಯೋಗ ಶಿಕ್ಷಕರಾದ ಎಸ್.ನಾಗೇಶ್ ಬಾಬು, ರಾಜು, ನಾಗಣ್ಣ, ಭಾಗ್ಯ ಶಂಕರ್, ಕೋಮಲ, ಕಸ್ತೂರಿ, ಕಲಾ, ಗೀತಾ, ಲೀಲಾ ಶಿವಕುಮಾರ್, ಅಂಜನಾ, ಸುಮಲತಾ, ಜಯಲಕ್ಷ್ಮಿ, ಯಶೋಧರ ಗೌಡ, ಬಸವರಾಜಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net