ಹುಬ್ಬಳ್ಳಿ ರೈಲ್ವೆ ವಿಭಾಗದ ವಿಶ್ವ ಪರಿಸರ ದಿನಾಚರಣೆ

New Hubli rail new
Published on

ಹುಬ್ಬಳ್ಳಿ : ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದ ವತಿಯಿಂದ ಇಲ್ಲಿನ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣದ ಆವರಣದಲ್ಲಿ ಶುಕ್ರವಾರದಂದು ವಿಶ್ವ ಪರಿಸರ ದಿನ ಆಚರಿಸಲಾಯಿತು.

ಹುಬ್ಬಳ್ಳಿ ವಿಭಾಗೀಯ ರೈಲು ವ್ಯವಸ್ಥಾಪಕಿ ಬೇಲಾ ಮೀನಾ, ಇಲ್ಲಿನ ರೈಲು ನಿಲ್ದಾಣದ ಆವರಣದಲ್ಲಿ ಪರಿಸರ ಮತ್ತು ಸ್ವಚ್ಚತೆಯ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿ, ನಿಲ್ದಾಣದ ಆವರಣದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಹಸಿರು ಪರಿಸರ ನಿಮಾಣಕ್ಕೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಹೇಳಿದರು.

ರೈಲ್ವೆ ಇಲಾಖೆ ವತಿಯಿಂದ ರೈಲು ಸೌಧ, ನ್ಯೂ ವಿದ್ಯಾರಣ್ಯ ನಗರ, ರನ್ನಿಂಗ್ ರೂಮ್ ಆವರಣ ಮತ್ತು ದೇವರಗುಡಿಯಾಳ ಪಂಪ ಹೌಸ್​ನಲ್ಲಿ ಪೇರು, ಮಾವು , ಸೀತಾಫಲ, ಲಿಂಬು, ಚಿಕ್ಕು , ರಾಮಫಲ, ನೆಲ್ಲಿ, ದಾಳಿಂಬೆ ಸೇರಿದಂತೆ 250ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು.

ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಟಿ.ವಿ. ಭೂಷಣ, ಪ್ರೇಮಚಂದ್ರ ಹರಿಜನ , ಹಿರಿಯ ವಿಭಾಗೀಯ ಪರಿಸರ ಮತ್ತು ಹೌಸ್ ಕೀಪಿಂಗ್ ವ್ಯವಸ್ಥಾಪಕ ಅಖಿಲೇಶಕುಮಾರ ತ್ರಿಪಾಠಿ, ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿ ಆರ್. ಪ್ರಸಾದ ಮತ್ತು ಇತರರು ಭಾಗವಹಿಸಿದ್ದರು.

ಹುಬ್ಬಳ್ಳಿ ವಿಭಾಗದ ಇತರ ರೈಲು ನಿಲ್ದಾಣಗಳಲ್ಲಿಯು ಸಹ ಪರಿಸರ ದಿನ ಆಚರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net