ಐಸಿಎಸ್ ಮಹೇಶ ಪಿಯು ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ

New ICS NEW
Published on

ಧಾರವಾಡ : ನಗರದ ಹಳಿಯಾಳ ಮುಖ್ಯ ರಸ್ತೆಯಲ್ಲಿರುವ ಐ.ಸಿ.ಎಸ್. ಮಹೇಶ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಬುಧವಾರದಂದು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮಹಾವಿದ್ಯಾಲಯದ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.

ಸಸಿ ನೆಟ್ಟು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಾಚಾರ್ಯ ಬಸನಗೌಡ ಪಾಟೀಲ, ಪರಿಸರ ಸಮತೋಲನವಾಗಬೇಕಾದರೆ ಗಿಡ, ಮರಗಳನ್ನು ಬೆಳೆಸುವುದು ಅಗತ್ಯ ಎಂದರು.

ಪ್ರಾಣಿ, ಪಕ್ಷಿಗಳಿಗೆ, ಮನುಷ್ಯರಿಗೆ ಜೀವಾಮೃತವಾಗಿ ಗಿಡಮರಗಳು ನಿತ್ಯ ಹಚ್ಚುಹಸುರಿನಿಂದ ಕಂಗೋಳಿಸುವಂತೆ ಮಾಡುವುದು ಮಾನವನ ಕರ್ತವ್ಯವಾಗಿದೆ ಎಂದು ಹೇಳಿದರು.

ಕಾಲೇಜಿನ ಆಡಳಿತ ಮಂಡಳಿಯ ಮುಖ್ಯಸ್ಥರಾದ ಬಸವರಾಜ ರೇವಡಿಗಾರ, ಡಾ. ಗೌರಿ ಜೋಶಿ, ಸಂಯೋಜನಾಧಿಕಾರಿ ಬಸವರಾಜ ತುಬಾಕಿ, ನವೀನ ಭಂಗಿ, ಉದಯಕುಮಾರ ಕೆ., ಡಾ. ಪ್ರತಿಭಾ ದೇಶಮುಖೆ, ಚಂದ್ರಕಾಂತ ನಾಯ್ಕ, ದೇವರೆಡ್ಡಿ ಹಾಗೂ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net