ಎಲ್ಲರ ಅಂತರಂಗದ ಭಾಗವಾಗಲಿ ಪರಿಸರ...

Red Cross 1
Published on

ಉರಗ ತಜ್ಞ ಗುರುರಾಜ ಸನಿಲ್​ ಆಶಯ

ವಿಶ್ವ ಪರಿಸರ ದಿನಾಚರಣೆಯಲ್ಲಿ ಉಪನ್ಯಾಸ

ವಿಜಯವಾಣಿ ಸುದ್ದಿಜಾಲ ಉಡುಪಿ

ಪ್ರಕೃತಿಯ ಕುರಿತಾದ ಮಾನವನ ಅಜ್ಞಾನವು ಹಲವು ಸಮಸ್ಯೆಗಳಿಗೆ ಮೂಲ ಕಾರಣವಾಗಿದೆ. ಪ್ರಕೃತಿಯ ನಿರ್ವಹಣೆಯಲ್ಲೂ ಅದರದ್ದೇ ಆದ ಲಯವಿದೆ. ಗಿಡ&ಮರಗಳು, ಬೆಟ್ಟ&ಗುಡ್ಡ, ಪ್ರಾಣಿ-ಪಕ್ಷಿಗಳು ಪ್ರಕೃತಿಗೆ ಪೂರಕವಾಗಿ ವರ್ತಿಸುತ್ತದೆ. ಅದನ್ನು ನಾವು ಅರ್ಥ ಮಾಡಿಕೊಂಡು ಪರಿಸರವನ್ನು ಅಂತರಂಗದ ಭಾಗವನ್ನಾಗಿ ಮಾಡಿಕೊಳ್ಳಬೇಕು ಎಂದು ಉರಗ ತಜ್ಞ ಗುರುರಾಜ ಸನಿಲ್​ ಆಶಿಸಿದರು.

ಉಡುಪಿ ಜಿಲ್ಲಾ ರೆಡ್​ ಕ್ರಾಸ್​ ಸಂಸ್ಥೆಯ ಆಶ್ರಯದಲ್ಲಿ ಡಾ. ಜಿ.ಶಂಕರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಯುವ ರೆಡ್​ ಕ್ರಾಸ್​ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ ಜೂನ್ 5ರಂದು ಆಯೋಜಿಸಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಪರಿಸರ ಮತ್ತು ಜೀವನ ವಿಷಯ ಕುರಿತು ಉಪನ್ಯಾಸ ನೀಡಿದರು.

Red Cross 2
ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ರಾಜ್ಯ ರೆಡ್​ ಕ್ರಾಸ್​ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಮಾತನಾಡಿ, ಈ ವರ್ಷದ ವಿಶ್ವ ಪರಿಸರದ ದಿನಾಚರಣೆಯ ಧ್ಯೇಯ ವಾಕ್ಯ, ಪ್ಲಾಸ್ಟಿಕ್​ ನಿಮೂರ್ಲನೆ ಕುರಿತು ವಿವರ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ. ಸೋಜನ್​ ಕೆ.ಜಿ. ಅಧ್ಯಕ್ಷತೆ ವಹಿಸಿದ್ದರು. ಸ್ನಾತಕೋತ್ತರ ವಿಭಾಗದ ಸಂಚಾಲಕ ರವಿ ಪ್ರಸಾದ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ರಾಮಚಂದ್ರ ಪಾಟ್ಕರ್​, ಯುವ ರೆಡ್​ಕ್ರಾಸ್​ ಸಂಯೋಜಕಿ ಡಾ. ದಿವ್ಯಾ ಎಂ.ಎಸ್​., ರೆಡ್​ಕ್ರಾಸ್​ ಆಡಳಿತ ಮಂಡಳಿಯ ಸದಸ್ಯ ಚಂದ್ರಶೇಖರ ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಾದ ವಿದ್ಯಾ ಮತ್ತು ಹರ್ಷಿತಾ ನಾಡಗೀತೆ ಹಾಡಿದರು. ಜಿಲ್ಲಾ ರೆಡ್​ ಕ್ರಾಸ್​ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಡಾ. ನಿಕೇತನಾ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ರೆಡ್​ ಕ್ರಾಸ್​ ಖಜಾಂಚಿ ರಮಾದೇವಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net