

ಸಿದ್ದಾಪುರ : ತಿತಿಮತಿ ಅರಣ್ಯ ವಲಯದ ಚೆನ್ನಂಗಿ ಶಾಖೆಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜು ಪಾಲಿಬೆಟ್ಟದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ. ನೀಲಕಂಠಗೌಡ ಮಾತನಾಡಿ, ಭೂಮಿ ಮೇಲೆ ಇರುವ ಪ್ರತಿಯೊಬ್ಬರೂ ಪರಿಸರ ಪ್ರೀತಿಸಬೇಕು. ಪರಿಸರದಲ್ಲಿರುವ ಕಾಡು ಪ್ರಾಣಿ, ಪಕ್ಷಿಗಳನ್ನು ಪ್ರೀತಿಸಬೇಕು. ಮಾನವನ ದುರಾಸೆಯಿಂದಾಗಿ ಜಲಮಾಲಿನ್ಯ, ವಾಯುಮಾಲಿನ್ಯ ಹಾಗೂ ಮಣ್ಣು ಮಾಲಿನ್ಯವಾಗುತ್ತಿದೆ. ಪರಿಸರವನ್ನು ಮೂಲ ಬಂಡವಾಳವಾಗಿ ನೋಡಿ ಪರಿಸರ ಉತ್ಪನ್ನಗಳನ್ನು ಮಾತ್ರ ಬಳಸಿಕೊಂಡು ಪರಿಸರವನ್ನು ಪ್ರೀತಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ತಿತಿಮತಿ ವಲಯ ಅರಣ್ಯಾಧಿಕಾರಿ ಗಂಗಾಧರ್, ಉಪ ವಲಯ ಅರಣ್ಯಾಧಿಕಾರಿಗಳಾದ ಟಿ.ಟಿ. ಶಶಿ, ಪ್ರಶಾಂತ್,
ಹಿರಿಯ ಉಪನ್ಯಾಸಕಿ ಕೆ.ಕೆ. ಶೈನಾ, ನಿವೃತ್ತ ಯೋಧ ಸೋಮಯ್ಯ ಹಾಗೂ ಲವ ಹಾಗೂ ಅರಣ್ಯ ಇಲಾಖೆಯ ಆರ್‌ಆರ್‌ಟಿ ತಂಡದ ಸಿಬ್ಬಂದಿ ಇದ್ದರು.