

ಹುಬ್ಬಳ್ಳಿ: ವಿಶ್ವ ಪರಿಸರ ದಿನದ ಅಂಗವಾಗಿ ಕೆಜಿಪಿ ಫೌಂಡೇಷನ್ ವತಿಯಿಂದ ಸಾವಿರ ಸಸಿಗಳನ್ನು ನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು.
ಅಮರಗೋಳ, ರಾಯಾಪುರ ಹಾಗೂ ಇತರೆಡೆಗಳಲ್ಲಿ ಸಸಿಗಳನ್ನು ನೆಡುವ ಸಂಕಲ್ಪ ಮಾಡಲಾಯಿತು. ಅಮರಗೋಳದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಕೆಜಿಪಿ ಫೌಂಡೇಷನ್ ಅಧ್ಯಕ್ಷ ಶ್ರೀಗಂಧ ಶೇಟ್ ಚಾಲನೆ ನೀಡಿದರು.
ಪಾಲಿಕೆ ಮಾಜಿ ಸದಸ್ಯ ಮಲ್ಲಿಕಾರ್ಜುನ ಹೊರಕೇರಿ, ಮುಖಂಡರಾದ ಬಸವರಾಜ ಕಿತ್ತೂರ, ಹರೀಶ ಅಂಗಡಿ, ಅನೂಪ, ಬಸವರಾಜ ಚಳಗೇರಿ, ಮನೀಶ್ ಇರಕಲ್, ಧ್ರುವ ನಾಯಕ್, ಜೀವನ್ ಹಾವನೂರ್, ನಾಗು ಮಾದರ, ರವಿ ಮಾದರ, ಪಾಂಡು ಸೋಗಿ, ಅಪ್ಪು ಮಾದರ, ಪೌರ ಕಾರ್ಮಿಕರು ಮತ್ತು ಇತರರು ಉಪಸ್ಥಿತರಿದ್ದರು.