ಜಿಲ್ಲಾಮಟ್ಟದ ವಿಶ್ವ ಪರಿಸರ ದಿನಾಚರಣೆ: ಮಕ್ಕಳಿಂದ ಹಳೇ ಚೀಲ ಸಂಗ್ರಹ

New Project (12)
Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ವಿಶ್ವ ಪರಿಸರ ದಿನದ ಅಂಗವಾಗಿ ಕಾಸರಗೋಡು ಜಿಲ್ಲಾ ಸ್ವಚ್ಛತಾ ಮಿಷನ್, ಕಾಸರಗೋಡು ನಗರಸಭೆ ಜಂಟಿಯಾಗಿ ಆಯೋಜಿಸಿದ್ದ ಜಿಲ್ಲಾಮಟ್ಟದ ಪರಿಸರ ದಿನವನ್ನು ಕಾಸರಗೋಡು ಜಿಎಚ್‌ಎಸ್ ಶಾಲೆಯಲ್ಲಿ ಆಚರಿಸಲಾಯಿತು.

ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ ಸಸಿ ನೆಡುವ ಮೂಲಕ ಸಮಾರಂಭ ಉದ್ಘಾಟಿಸಿದರು. ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಖಾಲಿದ್ ಪಚ್ಚಕ್ಕಾಡ್ ಅಧ್ಯಕ್ಷತೆ ವಹಿಸಿದ್ದರು. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಜಹೀರ್ ಆಶ್ಿ, ಲೋಕೋಪಯೋಗಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸಿಯಾನ ಹನ್ೀ, ನಗರಸಭಾ ಕಾರ್ಯದರ್ಶಿ ಅಬ್ದುಲ್ ಜಲೀಲ್ ಡಿ.ವಿ., ಮುಖ್ಯಶಿಕ್ಷಕಿ ಉಷಾ ಉಪಸ್ಥಿತರಿದ್ದರು.

ಶುಚಿತ್ವ ಮಿಷನ್ ಜಿಲ್ಲಾ ಸಂಯೋಜಕ ಪಿ.ಜಯನ್ ಸ್ವಚ್ಛತಾ ಸಂದೇಶ ನೀಡಿದರು. ಒಂದು ತಿಂಗಳ ಕಾಲ ನಡೆಯುವ ಅಭಿಯಾನದ ಬಗ್ಗೆ ವಿವರ ನೀಡಲಾಯಿತು. ನವಕೇರಳ ಸಹ ಸಂಯೋಜಕ ಎಚ್.ಕೃಷ್ಣ, ಕಾರ್ಯಕ್ರಮ ಅಧಿಕಾರಿ ರಂಜಿತ್, ಸಹಾಯಕ ಸಂಯೋಜಕಿ ರೇವತಿ, ಯಂಗ್ ಪ್ರೊೆಶನಲ್ ಸುಮೇಶ್, ಕ್ಲೀನ್ ಕೇರಳ ಸಂಸ್ಥೆ ಪ್ರತಿನಿಧಿ ಮಿಥುನ್ ಗೋಪಿ, ಆರೋಗ್ಯ ಇಲಾಖೆ, ಹಸಿರು ಕ್ರಿಯಾ ಸೇನೆ ಸಿಬ್ಬಂದಿ, ಶಿಕ್ಷಕರು, ಬೋಧಕೇತರ ಸಿಬ್ಬಂದಿ, ಸದಸ್ಯರು ಭಾಗವಹಿಸಿದ್ದರು.

ಮರುಬಳಕೆ ಅಭಿಯಾನ ಅಂಗವಾಗಿ ಮಕ್ಕಳಿಂದ ಹಳೇ ಚೀಲ ಸಂಗ್ರಹಿಸಿ ಕ್ಲೀನ್ ಕೇರಳ ಕಂಪನಿಗೆ ನೀಡಲಾಯಿತು. ಪರಿಸರ ಸ್ನೇಹಿ ವಿಧಾನ ಉತ್ತೇಜಿಸಲು ಸಸಿ ನೆಡಲಾಯಿತು. ಸ್ವಚ್ಛತಾ ಪ್ರತಿಜ್ಞೆ, ಸನ್ಮಾನ ಸಮಾರಂಭ ನಡೆಯಿತು. ಜಾರಿ ದಳದ ನಾಯಕ ಕೆ.ವಿ.ಮೊಹಮ್ಮದ್ ಮದನಿ ಸ್ವಾಗತಿಸಿದರು. ಕ್ಲೀನ್ ಸಿಟಿ ವ್ಯವಸ್ಥಾಪಕ ಮಧುಸೂದನನ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net