ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ವಿಶ್ವ ಆನೆ ದಿನ, ಆನೆ ಮರಿಗಳ ಆಟ ಮನಮೋಹಕ

12ank news and photos 03(2)
Published on

ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಬುಧವಾರ ವಿಶ್ವ ಆನೆ ದಿನ ಆಚರಿಸಲಾಯಿತು. ಉದ್ಯಾನವನದ 4 ಆನೆ ಮರಿಗಳ ಮಾವುತರಾದ ರವಿ, ಪ್ರತೀಕ್ಷಾ, ಕಾಳಪ್ಪ, ವೇಣುಗೋಪಾಲ ಅವರು ಹಣ್ಣು, ತರಕಾರಿ, ಬೆಲ್ಲ, ಕಬ್ಬು, ಗೆಣಸು ಸೇರಿ ಆಹಾರ ಧಾನ್ಯಗಳನ್ನು ಹಗ್ಗದಲ್ಲಿ ನೇತು ಹಾಕಿ ಅದನ್ನು ಆನೆ ಮರಿಗಳಿಗೆ ತೋರಿಸಿದಾಗ ಅವುಗಳು ಖುಷಿಯಿಂದ ತಿಂದು ಆಟ ಆಟವಾಡಿದವು.

ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಹಣಾಧಿಕಾರಿ ವನಶ್ರೀ ವಿಪಿನ್ ಸಿಂಗ್ ಮಾತನಾಡಿ, ವಿಶ್ವ ಆನೆ ದಿನದ ಹಿನ್ನೆಲೆಯಲ್ಲಿ ಆನೆ ಮರಿಗಳಿಗೆ ವಿಶೇಷ ಆಟ ಆಡಿಸುವ ಮೂಲಕ ಹಬ್ಬದಂತೆ ಆಚರಣೆ ಮಾಡಲಾಗುತ್ತಿದೆ ಎಂದರು.

ಆನೆಗಳಿಗೆ ನೀಡುವ ಪೌಷ್ಟಿಕಾಂಶಯುಕ್ತ ರಾಗಿ ಮುದ್ದೆ ತಯಾರಿಸುವ ವಿಡಿಯೋವನ್ನು ಕರ್ನಾಟಕ ಮೃಗಾಲಯ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಬಿಡುಗಡೆಗೊಳಿಸಿದರು.

ಬನ್ನೇರುಘಟ್ಟ ಜೈವಿಕ ಉದ್ಯಾನವನದ ವೈದ್ಯ ಡಾ.ಉಮಾಶಂಕರ್, ಬನ್ನೇರುಘಟ್ಟ ಜೈವಿಕ ಉದ್ಯಾನವನ ಶಿಕ್ಷಣಾಧಿಕಾರಿ ಅಮಲಾ, ಡಾ.ರಮೇಶ್, ಆರ್‌ಎ್ಒಕೆ ದಿನೇಶ್, ಆನೆಗಳ ಮೇಲ್ವಿಚಾರಕ ಸುರೇಶ್, ಜೀವಶಾಸ್ತ್ರಜ್ಞೆ ಐಶ್ವರ್ಯಾ ಹಾಗೂ ಮಾವುತರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net