ವಿಶ್ವ ಭೂಮಿ ದಿನ ಕಾರ್ಯಕ್ರಮ

gan-1
Published on

ಗಂಗೊಳ್ಳಿ: ರೀಫ್ ವಾಚ್ ಮರೈನ್ ಕನ್ಸರ್ವೇಶನ್ ಸಂಸ್ಥೆ, ಎಚ್‌ಎಲ್‌ಎಲ್ ಫೌಂಡೇಶನ್ ಜಂಟಿ ಆಶ್ರಯದಲ್ಲಿ ಕುಂದಾಪುರದ ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಸಹಕಾರದೊಂದಿಗೆ ವಿಶ್ವ ಭೂಮಿ ದಿನ ಕಾರ್ಯಕ್ರಮ ತ್ರಾಸಿ-ಕಂಚುಗೋಡು ಕಡಲ ತೀರದಲ್ಲಿ ಮಂಗಳವಾರ ನಡೆಯಿತು.

ಕುಂದಾಪುರ ವಲಯ ಅರಣ್ಯಾಧಿಕಾರಿ ರಾಘವೇಂದ್ರ, ಮೀನುಗಾರರ ಬಲೆಯಿಂದ ತಯಾರಿಸಿದ ಬೆಂಚು, ಟೇಬಲ್‌ನ್ನು ಸಮುದಾಯದ ಜನರಿಗೆ ಹಸ್ತಾಂತರಿಸಿದರು. ರೀಫ್ ವಾಚ್ ಸಂಸ್ಥೆ ಪ್ರಾಜೆಕ್ಟ್ ಮ್ಯಾನೇಜರ್ ಅರ್ಪಿತಾ ದತ್ತ ಕಡಲಾಮೆ ಸಂರಕ್ಷಣೆ, ಸಮುದ್ರ ತೀರದ ಸ್ವಚ್ಛತೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಕುಂದಾಪುರ ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಸತೀಶ ಕಾಂಚನ್, ದೀಪಾ, ಕಂಚುಗೋಡು ಶ್ರೀ ರಾಮ ಭಜನಾ ಮಂಡಳಿ ಅಧ್ಯಕ್ಷ ನಾಗೇಶ ಖಾರ್ವಿ, ವಿಶ್ವನಾಥ ಖಾರ್ವಿ, ನಾಗರಾಜ ಖಾರ್ವಿ, ರಮೇಶ ಖಾರ್ವಿ, ಉರಗತಜ್ಞ ನಾಗರಾಜ ಖಾರ್ವಿ ಬೆಣ್ಗೇರೆ, ಮಣಿಕಂಠ ಖಾರ್ವಿ ಬೆಣ್ಗೇರೆ ಮೊದಲಾದವರು ಉಪಸ್ಥಿತರಿದ್ದರು.

ಕಂಚುಗೋಡು ಭಾಗದ ಮೀನುಗಾರರು, ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು, ರೀಫ್ ವಾಚ್ ಸಂಸ್ಥೆ ಕಾರ್ಯಕರ್ತರು ತ್ರಾಸಿ-ಕಂಚುಗೋಡು ಕಡಲ ತೀರವನ್ನು ಸ್ವಚ್ಛಗೊಳಿಸುವುದರ ಜತೆಗೆ ಮೀನುಗಾರರು ಬಳಸಿ ಹಾಳಾದ ಬಲೆಗಳಿಂದ ತಯಾರಿಸಲಾದ ಬೆಂಚು, ಟೇಬಲ್‌ನ್ನು ಮೀನುಗಾರ ಸಮುದಾಯದವರ ಬಳಕೆಗಾಗಿ ಸಮುದ್ರ ತೀರದಲ್ಲಿ ಸ್ಥಾಪಿಸಿದರು.

ಪ್ರಕಾಶ ಖಾರ್ವಿ ಸ್ವಾಗತಿಸಿದರು. ರೀಫ್‌ವಾಚ್ ಸಂಸ್ಥೆ ಡಾ.ಪ್ರಕಾಶ್ ಕಾರ್ಯಕ್ರಮ ಸಂಯೋಜಿಸಿದ್ದರು. ವೆಂಕಟೇಶ ಶೇರುಗಾರ್ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net