

ಮುದ್ದೇಬಿಹಾಳ: ನ್ಯಾಯಾಲಯದ ಆವರಣದಲ್ಲಿ ಏ.22ರಂದು ಬೆಳಗ್ಗೆ 11 ಗಂಟೆಗೆ ವಿಶ್ವ ಭೂಮಿ ದಿನಾಚರಣೆ ಏರ್ಪಡಿಸಲಾಗಿದೆ.
ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂ, ಸರ್ಕಾರಿ ಇಲಾಖೆಗಳ ಆಶ್ರಯದಲ್ಲಿ ನಡೆಯುವ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ರವೀಂದ್ರಕುಮಾರ ಕಟ್ಟಿಮನಿ ಉದ್ಘಾಟಿಸುವರು. ಸಿವಿಲ್ ನ್ಯಾಯಾಧೀಶ ಸಂಪತ್ತಕುಮಾರ ಬಳೂಲಗಿಡದ ಉಪಸ್ಥಿತರಿರುವರು.
ಸಂದ ಅಧ್ಯ ಶಶಿಕಾಂತ ಮಾಲಗತ್ತಿ ಅಧ್ಯತೆ ವಹಿಸುವರು. ನಾಗರಾಜ ಪೂಜಾರ, ಬಸವರಾಜ ಆಹೇರಿ, ಅಪರ ಸರ್ಕಾರಿ ವಕೀಲರಾದ ಎಚ್.ಎಲ್. ಸರೂರ, ತಹಸೀಲ್ದಾರ್ ಬಲರಾಮ ಕಟ್ಟಿಮನಿ, ತಾಪಂ ಇಒ ನಿಂಗಪ್ಪ ಮಸಳಿ, ಸಿಡಿಪಿಒ ಶಿವಮೂರ್ತಿ ಕುಂಬಾರ, ಬಿಇಒ ಬಿ.ಎಸ್. ಸಾವಳಗಿ, ಸಿಪಿಐ ಮೆಹಮ್ಮೂದ್ ಸಿಯುದ್ದೀನ್ ಉಪಸ್ಥಿತರಿರುವರು. ನ್ಯಾಯವಾದಿ ಎಸ್.ಎಸ್. ಬಿರಾದಾರ ಅವರು ವಿಶ್ವ ಭೂಮಿ ದಿನ ಕುರಿತು ಉಪನ್ಯಾಸ ನೀಡುವರು ಎಂದು ಪ್ರಕಟಣೆ ತಿಳಿಸಿದೆ.