ಜೀವನ ಶೈಲಿಯಿಂದ ಮಧುಮೇಹ ಹೆಚ್ಚಳ: ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಹೇಳಿಕೆ

World Diabetes Day mandya
Published on

ಮಂಡ್ಯ: ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಮಧುಮೇಹಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಹೇಳಿದರು.

ನಗರದ ರೆಡ್‌ಕ್ರಾಸ್ ಭವನದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಕೃಷಿಕ ಲಯನ್ಸ್ ಸಂಸ್ಥೆ, ಸಕ್ಕರೆನಾಡು ಲಯನ್ಸ್ ಸಂಸ್ಥೆ, ಮಾಂಡವ್ಯ ಲಯನ್ಸ್ ಸಂಸ್ಥೆ ಹಾಗೂ ಸ್ಪಂದನಾ ಆಸ್ಪತ್ರೆ ಸಹಯೋಗದೊಂದಿಗೆ ವಿಶ್ವ ಮಧುಮೇಹ ದಿನದ ಅಂಗವಾಗಿ ರಕ್ತ ಪರೀಕ್ಷೆ, ಇಸಿಜಿ, ಬಿಪಿ ಉಚಿತ ತಪಾಸಣೆ ಹಾಗೂ ತಜ್ಞ ವೈದ್ಯರೊಂದಿಗೆ ಸಮಾಲೋಚನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಳಪೆ ಮತ್ತು ಜಡ ಜೀವನಶೈಲಿ, ಅನಾರೋಗ್ಯಕರ ಆಹಾರ ಪದ್ಧತಿ, ನಿದ್ರೆಯ ಕೊರತೆ, ಒತ್ತಡ, ಅನುವಂಶಿಕ ಕಾರಣಗಳಿಂದ ಸಕ್ಕರೆ ಕಾಯಿಲೆ ಹೆಚ್ಚಳವಾಗುತ್ತಿದೆ. ಈ ಕಾಯಿಲೆಯನ್ನು ಸದ್ದಿಲ್ಲದ ಕೊಲೆಗಾರ ಎಂದರೂ ತಪ್ಪಾಗಲ್ಲ ಎಂದರು.

ಸಕ್ಕರೆ ಕಾಯಿಲೆ ನಿಯಂತ್ರಣಕ್ಕಾಗಿ ಇನ್ಸುಲಿನ್ ಕಂಡುಹಿಡಿದ ವಿಜ್ಞಾನಿ ಸರ್ ಫ್ರೆಡಿಕ್ ಬ್ಯಾಂಟಿಂಗ್ ಜನ್ಮದಿನ. ಅವರ ನೆನಪಿಗಾಗಿ ವಿಶ್ವ ಮಧುಮೇಹ ದಿನವನ್ನು 1991 ರಿಂದ ಆಚರಿಸಲು ವಿಶ್ವಸಂಸ್ಥೆ ಘೋಷಿಸಿತು. ಪ್ರತಿವರ್ಷ ವಿಶ್ವದಲ್ಲಿ 40 ಲಕ್ಷ ಜನರು ಮಧುಮೇಹ ಕಾಯಿಲೆಗೆ ಬಲಿಯಾಗುತ್ತಿದ್ದಾರೆ. ಅದೇ ರೀತಿ ಭಾರತದಲ್ಲಿ ಸುಮಾರು 101 ಮಿಲಿಯನ್ ಜನರು ಮಧುಮೇಹದಿಂದ ಬಳಲುತ್ತಿದ್ದರೆ, 136 ಮಿಲಿಯನ್ ಜನರು ಮಧುಮೇಹ ಪೂರ್ವ ಹಂತಗಳಲ್ಲಿದ್ದಾರೆ. ಉತ್ತಮ ವೈದ್ಯಕೀಯ ಚಿಕಿತ್ಸೆಯ ಜತೆಗೆ ಜೀವನಶೈಲಿ ಮತ್ತು ಆಹಾರಕ್ರಮಗಳಲ್ಲಿ ಕೆಲವೊಂದು ಆರೋಗ್ಯಕರ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಹುದು ಎಂದು ಕಿವಿಮಾತೇಳಿದರು.

ಸ್ಪಂದನಾ ಆಸ್ಪತ್ರೆಯ ವೈದ್ಯ ಡಾ.ಆದಿತ್ಯ ಮಾತನಾಡಿ, ನಾವು ತಿಂದತಹ ಎಲ್ಲ ಪದಾರ್ಥಗಳು ಸಕ್ಕರೆಯ ಅಂಶವಾಗಿಯೇ ರಕ್ತಕ್ಕೆ ಸೇರುತ್ತದೆ. ದೇಹಕ್ಕೆ ಎಷ್ಟು ಬೇಕೋ ಅಷ್ಟನ್ನು ಬಳಸಿಕೊಂಡು ದೇಹದ ವಿವಿಧ ಭಾಗಗಲ್ಲಿ ಶೇಖರಿಸಿಟ್ಟಿಕೊಂಡಿರುತ್ತದೆ. ಆದ್ದರಿಂದ ಮಧುಮೇಹಿಗಳು ಸಮಪ್ರಮಾದಲ್ಲಿ ಸೊಪ್ಪು, ತರಕಾರಿ, ಕಾಳುಗಳ ಸೇವನೆ ಅತ್ಯಗತ್ಯ ಎಂದರು.

ರೆಡ್‌ಕ್ರಾಸ್ ಸಂಸ್ಥೆಯ ಜಂಟಿ ಕಾರ್ಯದರ್ಶಿ ರಂಗಸ್ವಾಮಿ, ಜವರೇಗೌಡ, ಮಾಂಡವ್ಯ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಡಾ.ಶಿವಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net