

ಮೈಸೂರು: ಕ್ರಿಕೆಟ್ ಪ್ರೇಮಿಗಳ ಹಬ್ಬ ‘ವಿಶ್ವಕಪ್ ಕ್ರಿಕೆಟ್’ ಪಂದ್ಯಾವಳಿಯ ಕ್ರೇಜ್ ಹೆಚ್ಚಾಗಿದ್ದು ಎಲ್ಲಿ ನೋಡಿದರೂ ಕ್ರಿಕೆಟ್ ಜಪ. ಕ್ರಿಕೆಟ್ ಅಭಿಮಾನಿಗಳಂತೂ ತಮ್ಮ ನೆಚ್ಚಿನ ತಂಡಗಳ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಮುಳುಗಿ ಸಂಭ್ರಮಿಸುತ್ತಿದ್ದಾರೆ.
ಇಂತಹ ಸಮಯದಲ್ಲಿ ನಗರದ ಹುಣಸೂರು ರಸ್ತೆಯಲ್ಲಿನ ಪೆಗ್ಸ್ ಅಂಡ್ ಕೆಗ್ಸ್ ರೆಸ್ಟೋರೆಂಟ್‌ನಲ್ಲಿ ಕ್ರಿಕೆಟ್ ಪ್ರೇಮಿಗಳ ಸಂಭ್ರಮವನ್ನು ದುಪ್ಪಟ್ಟು ಮಾಡಲಾಗಿದೆ.
ರೆಸ್ಟೋರೆಂಟ್‌ನಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರರು ಬಳಸಿದ ಕ್ರಿಕೆಟ್ ಪರಿಕರಗಳನ್ನು ಪ್ರದರ್ಶನ ಮಾಡಲಾಗಿದೆ. 2011ರ ವಿಶ್ವಕಪ್ ವಿಜೇತ ಭಾರತ ತಂಡದ 11 ಸದಸ್ಯರ ಹಸ್ತಾಕ್ಷರವುಳ್ಳ ಬ್ಯಾಟ್ ಪ್ರದರ್ಶನ ಮಾಡಲಾಗಿದೆ. 2011ರ ವಿಶ್ವಕಪ್‌ನಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೊಲ್ಕರ್ ಬಳಸಿದ ಬ್ಯಾಟ್‌ನ್ನು ಕೂಡ ಪ್ರದರ್ಶನಕ್ಕಿಡಲಾಗಿದೆ. ಜತೆಗೆ ಭಾರತಕ್ಕೆ ಎರಡನೇ ಬಾರಿಗೆ ವಿಶ್ವಕಪ್ ತಂದುಕೊಡುವಲ್ಲಿ ಯಶಸ್ವಿಯಾಗಿದ್ದ, ಕೂಲ್ ಕ್ಯಾಪ್ಟನ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಅವರು ಬಳಸಿರುವ ಗ್ಲೌಸ್‌ಗಳು, ಹೆಮ್ಮೆಯ ಕನ್ನಡಿಗ, ಭಾರತದ ಗೋಡೆ ಎಂದೇ ಖ್ಯಾತರಾಗಿದ್ದ ರಾಹುಲ್ ದ್ರಾವಿಡ್ 2007ರ ವಿಶ್ವಕಪ್‌ನಲ್ಲಿ ಬಳಸಿದ್ದ ಗ್ಲೌಸ್‌ಗಳು ಪ್ರದರ್ಶನಕ್ಕಿವೆ. ನಗರದ ಕ್ರಿಕೆಟ್ ಅಭಿಮಾನಿಗಳಂತೂ ಪೆಗ್ಸ್ ಅಂಡ್ ಕೆಗ್ಸ್ ರೆಸ್ಟೋರೆಂಟ್‌ನಲ್ಲಿ ಪ್ರದರ್ಶನ ಮಾಡಿರುವ ತಮ್ಮ ನೆಚ್ಚಿನ ಕ್ರಿಕೆಟ್ ತಾರೆಯರ ಬ್ಯಾಟ್, ಗ್ಲೌಸ್‌ಗಳನ್ನು ವೀಕ್ಷಿಸಲು ಮುಗಿ ಬೀಳುತ್ತಿದ್ದಾರೆ. ಬ್ಯಾಟ್, ಗ್ಲೌಸ್ ಜತೆ ತಮ್ಮ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.
ಪೆಗ್ಸ್ ಅಂಡ್ ಕೆಗ್ಸ್ ರೆಸ್ಟೋರೆಂಟ್‌ನಲ್ಲಿ ವಿಶ್ವಕಪ್‌ನ ಎಲ್ಲ ಪಂದ್ಯಗಳ ನೇರ ಪ್ರಸಾರವನ್ನು ಬಿಗ್ ಸ್ಕ್ರೀನ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ. ಅದಕ್ಕಾಗಿ ರೆಸ್ಟೋರೆಂಟ್‌ನಲ್ಲಿ ಐದು ದೊಡ್ಡ ಪರದೆ ಅಳವಡಿಸಲಾಗಿದೆ. ಗ್ರಾಹಕರು ರೆಸ್ಟೋರೆಂಟ್‌ನ ಯಾವುದೇ ಮೂಲೆಯಲ್ಲಿ ಕೂತು ಪಂದ್ಯ ವೀಕ್ಷಿಸಬಹುದು. ಈಗಾಗಲೇ ಭಾರತ ತಂಡ ವಿಶ್ವಕಪ್‌ನಲ್ಲಿ ಆಡಿರುವ ಮೂರು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಮೇಲಿದೆ. ಮೂರು ಪಂದ್ಯಗಳನ್ನು ರೆಸ್ಟೋರೆಂಟ್‌ನಲ್ಲಿ ನೇರ ಪ್ರಸಾರ ಮಾಡಲಾಗಿದೆ. ಭಾರತ ತಂಡದ ಪಂದ್ಯಗಳ ಜತೆಗೆ ಇತರೆ ಎಲ್ಲ ಪಂದ್ಯಗಳ ನೇರ ಪ್ರಸಾರಕ್ಕೂ ವ್ಯವಸ್ಥೆ ಮಾಡಲಾಗಿದೆ. ಇತ್ತೀಚೆಗೆ ನಡೆದ ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯವನ್ನು ರೆಸ್ಟೋರೆಂಟ್‌ನಲ್ಲಿ ಅಪಾರ ಸಂಖ್ಯೆಯಲ್ಲಿ ಆಸಕ್ತರು ವೀಕ್ಷಿಸಿದರು. ಭಾರತ ತಂಡದ ಗೆಲುವನ್ನು ಸಂಭ್ರಮಿಸಿದರು.
ವಿಶ್ವಕಪ್ ಮುಗಿಯುವರೆಗೂ ಪೆಗ್ಸ್ ಅಂಡ್ ಕೆಗ್ಸ್ ರೆಸ್ಟೋರೆಂಟ್‌ನಲ್ಲಿ 2011ರ ವಿಶ್ವಕಪ್ ವಿಜೇತ ಭಾರತ ತಂಡದ 11 ಸದಸ್ಯರ ಹಸ್ತಾಕ್ಷರವುಳ್ಳ ಬ್ಯಾಟ್ ಪ್ರದರ್ಶನಕ್ಕಿಡಲಾಗಿದೆ. ಜತೆಗೆ ಸಚಿನ್ ತೆಂಡೊಲ್ಕರ್ ಬಳಸಿದ ಬ್ಯಾಟ್, ಮಹೇಂದ್ರ ಸಿಂಗ್ ಧೋನಿ ಮತ್ತು ದ್ರಾವಿಡ್ ಬಳಸಿರುವ ಗ್ಲೌಸ್‌ಗಳನ್ನು ವೀಕ್ಷಿಸಬಹುದು.ಮಂಜು, ಪೆಗ್ಸ್ ಅಂಡ್ ಕೆಗ್ಸ್ ರೆಸ್ಟೋರೆಂಟ್, ಮಾಲೀಕ