ವಿಶ್ವ ಮಟ್ಟದ ಕಾದಂಬರಿಕಾರ ಭೈರಪ್ಪ

15dvk 2
Published on

ಬೆಳಗಾವಿ: ಖ್ಯಾತ ಕಾದಂಬರಿಕಾರ ಭೈರಪ್ಪ ಕನ್ನಡಡಿಗರಷ್ಟೆ ಅಲ್ಲದೆ ಮರಾಠಿ ಓದುಗರ ಬಳಗವನ್ನು ಹೊಂದಿ, ಅವರ ಪ್ರೀತಿಗೆ ಪಾತ್ರರಾದವರು. ಇವರ ಕೃತಿಗಳು ಕನ್ನಡದಷ್ಟೇ ಮರಾಠಿ ಭಾಷೆಯಲ್ಲಿ ಮಾರಾಟವಾಗುತ್ತವೆ. ಹೀಗಾಗಿ ಭೈರಪ್ಪ ಕನ್ನಡದಲ್ಲಿ ಬರೆಯುವ ಮರಾಠಿ ಲೇಖಕರಂತಾಗಿದ್ದರು ಎಂದು ಧಾರವಾಡದ ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್​ ಅಧ್ಯಕ್ಷ ಡಾ.ಸರಜೂ ಕಾಟ್ಕರ್​ ಹೇಳಿದರು.

ಅಕಾಡೆಮಿ ಆಫ್​ ಕಂಪರೇಟಿವ್​ ಫಿಲಾಸಫಿ ಆ್ಯಂಡ್​ ರಿಲಿಜನ್​ ಸಂಟನೆಯಿಂದ ನಗರದ ಹಿಂದವಾಡಿಯ ಗುರುದೇವ ರಾನಡೆ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಡಾ.ಎಸ್​.ಎಲ್​.ಭೈರಪ್ಪ ನುಡಿ ನಮನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಷ್ಟ್ರದ 23 ಭಾಷೆಗಳಲ್ಲಿ ಭೈರಪ್ಪನವರ ಕೃತಿಗಳು ಭಾಷಾಂತರಗೊಂಡಿವೆ. ಪರ್ವ ರಷಿಯನ್​, ಇಂಗ್ಲಿಷ್​ ಮಾತ್ರವಲ್ಲ, ಚೀನಿ ಭಾಷೆಗೂ ಅನುವಾದಗೊಂಡಿವೆ. ಹೀಗಾಗಿ ವಿಶ್ವ ಮಟ್ಟದ ಕಾದಂಬರಿಕಾರರು ಎಂದು ಬಣ್ಣಿಸಿದರು. ಸಾಹಿತಿ ಗುಂಡೇನಟ್ಟಿ ಮಧುಕರ ಮಾತನಾಡಿ, ಭೈರಪ್ಪ ಅವರು ಬೆಳಗಾವಿಗೆ ಬಂದಿದ್ದಾಗ ಅವರೊಂದಿಗೆ ಎರಡು ದಿನಗಳ ಕಾಲ ಇದ್ದೆ. ಅವರ ಪ್ರಶ್ನೆಗಳು ನನಗೆ ಹಲವಾರು ಹೊಸ ವಿಷಯ ತಿಳಿಸಿಕೊಟ್ಟಿದ್ದವು ಎಂದರು.

ರಾಣಿ ಚನ್ನಮ್ಮ ವಿವಿ ಉಪಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ, ಆರ್​.ಎಸ್​.ಎಸ್​. ಕರ್ನಾಟಕ ಉತ್ತರ ಪ್ರಾಂತದ ಕಾರ್ಯನಿರ್ವಾಹಕ, ರಾವೇಂದ್ರ ಕಾಗವಾಡ ಮಾತನಾಡಿದರು. ರವಿ ಕೊಟಾರಗಸ್ತಿ,

ಆರ್​.ಜಿ.ಮುತಾಲಿಕ, ಸುಬ್ರಮಣ್ಯ ಭಟ್ಟ, ಮಾರುತಿ ಝಿರಲಿ, ಆಶಾ ಯಮಕನಮರಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net