World Cancer Day 2025; IMA ವತಿಯಿಂದ ಕ್ಯಾನ್ಸರ್​ ಜಾಗೃತಿ ಅಭಿಯಾನ

IMA
Published on

ಬೆಂಗಳೂರು: ವಿಶ್ವ ಕ್ಯಾನ್ಸರ್ ದಿನದ ಪ್ರಯುಕ್ತ ಐಎಮ್​ಎ ಕರ್ನಾಟಕ ರಾಜ್ಯ ಶಾಖೆಯು ಇಂದು ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕ್ಯಾನ್ಸರ್ ಜಾಥಾ ಆಯೋಜಿಸಿ ಯಶಸ್ವಿಯಾಗಿ ನಡೆಸಲಾಯಿತು ಕಾರ್ಯಕ್ರಮದಲ್ಲಿ ಡಾ. ಮರಿಗೌಡ ಟಿ ಎಸ್ ಐಎಂಎ ಉಪಾಧ್ಯಕ್ಷರು ಡಾ. ಸೂರಿರಾಜು ವಿ ಗೌರವ ಕಾರ್ಯದರ್ಶಿಗಳು, ಡಾ ಸುರೇಶ್ ಕಗಲಕರ್, ಡಾ ಮಧುಶಂಕರ್ ಎಲ್ ಡಾ ವಿಜಯಾನಂದ ಅಧ್ಯಕ್ಷರು ಬೆಂಗಳೂರು ಶಾಖೆ, ಡಾ ಮಹೇಶ್ ಕಾರ್ಯದರ್ಶಿ ಬೆಂಗಳೂರು ಶಾಖೆ ಹಾಗೂ ಡಾ ಶಾಂತಲ ಗಿರೀಶ್ ಅಧ್ಯಕ್ಷರು ಐ ಎಂ ಎ ಯಲಹಂಕ ಹಾಗೂ ಇನ್ನಿತರ ವೈದ್ಯರು, ಪ್ರಮುಖರು, ರೀಗಲ್ ಆಸ್ಪತ್ರೆ ಸಿಬ್ಬಂದಿಗಳು, ದಾಸಪ್ಪ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಒಂಕಲಜಿ ವಿದ್ಯಾರ್ಥಿಗಳು ಮತ್ತು ಇನ್ನೂರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು ಹಾಗೂ ಮಾದ್ಯಮ ಮಿತ್ರರು ಸಾಕ್ಷಿಯಾದರು.

ಡಾ ಸೂರಿರಾಜು ವಿ ಗೌರವ ಕಾರ್ಯದರ್ಶಿಗಳು ಐಎಂಎ ಕೆಎಸ್ ಬಿ ನೆರೆದವರನ್ನು ಉದ್ದೇಶಿಸಿ ಮಾತನಾಡುತ್ತಾ ಹಿಂದಿನ ದಿನಗಳಲ್ಲಿ ಕ್ಯಾನ್ಸರ್ ಬಂತೆಂದರೆ ಜೀವನದ ಕೊನೆ ಘಟ್ಟ ವಾಗಿ ಪರಿಗಣಿಸಬೇಕಾಗಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಬಹುತೇಕ ಕ್ಯಾನ್ಸರ್ ಗೆ ಚಿಕಿತ್ಸೆ ಇದೆ ಹಾಗೂ ಮುಂಜಾಗೃತೆಯಿಂದ ಅದನ್ನು ತಡೆಗಟ್ಟಬಹುದು ಎಂದು ತಿಳಿಸಿದರು ಕ್ಯಾನ್ಸರ್ ಎಷ್ಟು ತೊಂದರೆ ನೀಡುತ್ತದೆ ಬರೀ ರೋಗಿಯಷ್ಟೇ ಅಲ್ಲ ಅದರಿಂದ ಇಡೀ ಕುಟುಂಬಕ್ಕೆ ಆಗುವ ತೊಂದರೆಗಳು ಎಷ್ಟು ಎಂದು ವಿವರಿಸಿದರು, ಕಿಡ್ನಿ ಹಾಗೂ ಪ್ರಾಸ್ಟೇಟ್ ಕ್ಯಾನ್ಸರ್ ಬಗ್ಗೆ ಜಾಗೃತಿ. ಮುಂಜಾಗೃತಿ ಹಾಗೂ ತಡೆಗಟ್ಟುವ ಮಾರ್ಗಗಳ ಬಗ್ಗೆ ಮಾತನಾಡಿದರು ಹಾಗೂ ಕ್ಯಾನ್ಸರ್ ರೋಗವನ್ನು ಗುಣಪಡಿಸಲು ಈಗಿನ ದಿನಗಳಲ್ಲಿ ಹಲವು ವ್ಯಾಕ್ಸೀನ್ ಗಳು ಲಭ್ಯವಿದ್ದು ಅದು ಎಷ್ಟು ಮುಖ್ಯ ಎಂದು ತಿಳಿಸಿದರು.

ಡಾ ಮರಿಗೌಡ ಟಿ ಎಸ್ ಉಪಾಧ್ಯಕ್ಷರು ಕ್ಯಾನ್ಸರ್ ರೋಗದ ಲಕ್ಷಣಗಳು ಕಂಡು ಬರುವ ಸಾಮಾನ್ಯ ಲಕ್ಷಣಗಳ ಬಗ್ಗೆ ಮಾತನಾಡಿದರು ಹಳ್ಳಿಗಳಲ್ಲಿ ಮೂಢನಂಬಿಕೆಗಳು ಹೇಗೆ ರೋಗ ಉಲ್ಬಣಗೊಳ್ಳುವಲ್ಲಿ ಕಾರಣವಾಗುತ್ತವೆ ಪ್ರತಿ 6 ತಿಂಗಳಿಗೊಮ್ಮೆ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು ಎಂದು ತಿಳಿಸಿದರು.

IMA Cancer

ಡಾ ಸುರೇಶ್ ಕಗಲ್ಕರ್ ಚೇರ್ಮನ್ ಪಬ್ಲಿಕ್ ಹೆಲ್ತ್ ಕಮಿಟಿ ಅವರು ಮಾತನಾಡಿ ಜನಸಾಮಾನ್ಯರು ರೋಗಗಳ ಹಾಗೂ ನಿಯಂತ್ರಿಸುವ ಅಭ್ಯಾಸಗಳನ್ನು ಕಲಿಯಬೇಕು ಹಾಗೂ ವೈದ್ಯರುಗಳು ಇಂತಹ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಬೇಕು ಇದರಿಂದ ಎಷ್ಟೋ ಕಾಯಿಲೆಗಳು ಕಡಿಮೆಯಾಗುತ್ತದೆ ಹಾಗೂ ಸ್ಕ್ರೀನ್ ಟೆಸ್ಟ್ ಗಳನ್ನು ಮಾಡಿಸಿಕೊಳ್ಳುವ ಮುಖಾಂತರ ರೋಗಗಳನ್ನು ಬೇಗನೆ ಪತ್ತೆ ಮಾಡಬಹುದು ಸಾಮಾನ್ಯ ಜನರು ನಿರ್ಲಕ್ಷ ವಹಿಸಿ ಕಾಯಿಲೆಗಳು ಉಲ್ಬಣವಾಗುವವರೆಗೂ ಬಿಡುತ್ತಾರೆ ಇಂತಹ ಮನಸ್ಥಿತಿ ಬದಲಾಗಬೇಕು ಎಂದು ತಿಳಿಸಿದರು.

ಡಾ ವಿಜಯಾನಂದ ಅವರು ಮಾತನಾಡುತ್ತಾ ಕ್ಯಾನ್ಸರ್ ಬರದಂತೆ ತಡೆಯಲು ವ್ಯಾಕ್ಸೀನ್ ಹಾಗೂ ತಿನ್ನುವ ಆಹಾರಗಳ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಧೂಮಪಾನ ಮದ್ಯಪಾನ ನಿಷೇಧಿಸಬೇಕು ಎಂದು ತಿಳಿಸಿದರು. ಡಾ ಮಹೇಶ್ ರವರು ಮಾತನಾಡಿ ಕ್ಯಾನ್ಸರ್ ತಡೆಯಲು ಜಾಗೃತಿ ಹಾಗೂ ಹೆಲ್ತ್ ಚೆಕಪ್ ಆಗಾಗ ಮಾಡಿಸಿಕೊಳ್ಳುವುದು ಉತ್ತಮ ಎಂದು ತಿಳಿಸಿದರು.

ಡಾ ಶಾಂತಲ ಗಿರೀಶ್ ಅಧ್ಯಕ್ಷರು ಐಎಂಎ ಯಲಹಂಕ ಮಾತನಾಡುತ್ತಾ ಕ್ಯಾನ್ಸರ್ ಬರದಂತೆ ತಡೆಗಟ್ಟುವ ಮಾರ್ಗಗಳು ಮುಖ್ಯ ಹೆಣ್ಣು ಮಕ್ಕಳು ವ್ಯಾಕ್ಸೀನ್ ಕಡ್ಡಾಯವಾಗಿ ಹಾಕಿಸಿಕೊಳ್ಳುವುದು ಒಳ್ಳೆಯದು ಎಂದು ತಿಳಿಸಿದರು ಹಾಗೂ ಇಂತಹ ಆರೋಗ್ಯ ಕಾಳಜಿ ಮೂಡಿಸುವ ಜಾಥಾ ಮತ್ತು ಶಿಬಿರಗಳು ಸಮಾಜಕ್ಕೆ ಮುಖ್ಯ ಎಂದು ವಿವರಿಸಿದರು ಹಾಗೂ ಕ್ಯಾನ್ಸರ್ ಗೆ ಕೇವಲ ದೂಮಪಾನ, ಮದ್ಯಪಾನ, ನಶ ಪದಾರ್ಥ ಗಳಲ್ಲದೆ. ಜಂಕ್ ಆಹಾರ ಗಳು ನಮ್ಮ ದೈನಿಕ ಅಭ್ಯಾಸಗಳು ಕಾರಣವಾಗುತ್ತವೆ ಆದ್ದರಿಂದ ಉತ್ತಮ ಅಭ್ಯಾಸ ಹಾಗೂ ವ್ಯಾಯಾಮಗಳು ಒಂದು ಮುಂಜಾಗ್ರತೆ ಎಂದು ತಿಳಿಸಿದರು. ಸುಮಾರು 250 ಕ್ಕೂ ಹೆಚ್ಚು ಜನರು ಜಾಥಾದಲ್ಲಿ ಪಾಲ್ಕೊಂಡು ಘೋಷಗಳನ್ನು ಕೂಗಿ ಸಾರ್ವಜನಿಕರ ಗಮನ ಸೆಳೆಯಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net