ಕೆಎಲ್​ಇ ಜೆಜಿಎಂಎಂ ಮೆಡಿಕಲ್ ಕಾಲೇಜಿನಲ್ಲಿ ವಿಶ್ವ ಸ್ತನ್ಯಪಾನ ದಿನ

New KLE Medical New
Published on

ಹುಬ್ಬಳ್ಳಿ : ಇಲ್ಲಿನ ಕೆಎಲ್​ಇ ಜಗದ್ಗುರು ಗಂಗಾಧರ ಮಹಾಸ್ವಾಮಿಗಳು ಮೂರುಸಾವಿರ ಮಠ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವಿಶ್ವ ಸ್ತನ್ಯಪಾನ ದಿನವನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು.

ಕೆಎಲ್​ಇ ಹುಬ್ಬಳ್ಳಿ ಕೋ ಆಪ್​ರೇಟಿವ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗ ಮತ್ತು ರೋಟರಿ ಕ್ಲಬ್ ಸೆಂಟರ್ ಹುಬ್ಬಳ್ಳಿ ಸಹಯೋಗದೊಂದಿಗೆ ಈ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಶಾರದಾ ಮೆಟಗುಟ್ಟ ಮಾತನಾಡಿ, ತಾಯಿಯ ಎದೆಹಾಲು ಮಗುವಿನ ಬೆಳವಣಿಗೆ ಅತೀ ಅವಶ್ಯ ಎಂದು ಹೇಳಿದರು.

ಅತಿಥಿಯಾಗಿದ್ದ ಕೆಎಲ್​ಇ ಹುಬ್ಬಳ್ಳಿ ಕೋಆಪ್​ರೇಟಿವ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ವೈ.ಎಫ್. ಹಂಜಿ ಮಾತನಾಡಿ, ನವಜಾತ ಶಿಶುಗಳಿಗೆ ತಾಯಿಯ ಎದೆ ಹಾಲು ಅಮೃತ ಇದ್ದ ಹಾಗೆ ಎಂದು ಹೇಳಿದರು.

ಮತ್ತೊಬ್ಬ ಅತಿಥಿ ಡಾ. ಶೋಭಾ ಬೆಂಬಳಗಿ ಮಾತನಾಡಿ, ಮಗು ಜನಿಸಿದ ತಕ್ಷಣ ಅಥವಾ ಸಾಧ್ಯವಾದಷ್ಟು ಒಂದು ತಾಸಿನೊಳಗೆ ಎದೆಹಾಲು ಕುಡಿಸುವುದರಿಂದ ನವಜಾತ ಶಿಶುವನ್ನು ಅನೇಕ ಮಾರಕ ಕಾಯಿಲೆಗಳಿಂದ ರಕ್ಷಿಸಬಹುದು ಎಂದು ತಿಳಿಸಿದರು.

ಚಿಕ್ಕ ಮಕ್ಕಳ ವಿಭಾಗದ ಡಾ. ಅನುಷ್ಕಾ ಕುಲಕರ್ಣಿ ಮಾತನಾಡಿ, ತಾಯಂದಿರು ಮಗುವಿಗೆ ಎದೆಹಾಲು ಕುಡಿಸುವುದರಿಂದ ಮಗುವಿನ ಮಾನಸಿಕ ಬೆಳವಣಿಗೆಯನ್ನು ಉತ್ತೇಸುವುದಲ್ಲದೆ, ಮಗುವನ್ನು ನ್ಯುಮೋನಿಯಾ ಮತ್ತು ಅತಿಸಾರದಿಂದ ರಕ್ಷಿಸುತ್ತದೆ ಎಂದರು.

ಕೆಎಲ್​ಇ ಜೆಜಿಎಂಎಂ ಮೆಡಿಕಲ್ ಕಾಲೇಜು ಪ್ರಸೂತಿ ಮತ್ತು ಸ್ತ್ರೀ ರೋಗ ವಿಭಾಗದ ಡಾ. ಸುಪ್ರೀಯಾ ಬನ್ನಿಕೊಪ್ಪ, ಡಾ. ಲತಾ ಮಂಕಣಿ, ಡಾ. ಉದಯಶ್ರೀ, ಡಾ. ರಚನಾ ಘಂಟಿ ಮತ್ತು ಚಿಕ್ಕ ಮಕ್ಕಳ ವಿಭಾಗದ ಎಲ್ಲ ತಜ್ಞ ವೈದ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net