

ಮಂಗಳೂರು: ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಅದಾನಿ ಫೌಂಡೇಶನ್ ನಗರ ಮತ್ತು ಗ್ರಾಮೀಣ ಶಿಶು ಅಭಿವೃದ್ಧಿ ಯೋಜನೆಯ ಸಹಯೋಗದಲ್ಲಿ ಹಲವು ಅಂಗನವಾಡಿಗಳಲ್ಲಿ ಸ್ತನ್ಯ ಪಾನ ಪ್ರಾಮುಖ್ಯತೆಯ ಬಗ್ಗೆ ರಸಪ್ರಶ್ನೆ, ಪೋಸ್ಟರ್ ರಚನೆ ಸ್ಪರ್ಧೆ ಆಯೋಜಿಸಿತ್ತು.
ಪೋಷನ್ ರ‌್ಯಾಲಿ ನಡೆಸಿ ಗರ್ಭಿಣಿಯರ ಜತೆ ಸಂವಾದ ನಡೆಯಿತು. ಪದವಿನಂಗಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮನಪಾ ಸದಸ್ಯೆ ಸಂಗೀತಾ ನಾಯಕ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಗಳೂರು ನಗರ ಶ್ವೇತಾ ಎನ್., ಸುಪೋಷನ್ ಅಧಿಕಾರಿ ಪ್ರೇಮಾ ಡಿಸೋಜ ಮೊದಲಾದವರಿದ್ದರು.