

ಸರಗೂರು: ಪಟ್ಟಣದ ಸರ್ಕಾರಿ ಸಾರ್ವಜನಿಕ ಗ್ರಂಥಾಲಯದಲ್ಲಿ ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್.ರಂಗನಾಥನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಬುಧವಾರ ವಿಶ್ವ ಪುಸ್ತಕ ದಿನ ಆಚರಿಸಲಾಯಿತು.
ಗ್ರಂಥಾಲಯ ಮೇಲ್ವಿಚಾರಕ ಬಿಡಗಲು ಶಿವಣ್ಣ ಮಾತನಾಡಿ, ಅರಿವಿನ ಬೆಳಕು ಪುಸ್ತಕ. ಸಾರ್ವಜನಿಕರಲ್ಲಿ ಓದಿನ ಅಭಿರುಚಿಯನ್ನು ಹೆಚ್ಚಿಸುವ ಮೂಲಕ ಪುಸ್ತಕೋದ್ಯಮ ಮತ್ತು ಗ್ರಂಥಸ್ವಾಮ್ಯದ ಬಗ್ಗೆ ತಿಳಿವಳಿಕೆ ಮೂಡಿಸಲು ಪ್ರತಿ ವರ್ಷ ಗ್ರಂಥಾಲಯಗಳಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.
ಸಾರ್ವಜನಿಕರು, ಓದುಗರು ಗ್ರಂಥಾಲಯದ ಉಪಯೋಗ ಪಡೆಯಬೇಕು ಮತ್ತು ಯಾವುದೇ ಪುಸ್ತಕವನ್ನು ಇಷ್ಟಪಟ್ಟು ಓದಿದಾಗ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ಗ್ರಂಥಾಲಯ ಸಿಬ್ಬಂದಿ ವರ್ಷಾ, ತಾಪಂ ಸಿಬ್ಬಂದಿ ಸಿದ್ದರಾಜು, ಮನೋಹರ್, ವಿನಯ್, ಹರೀಶ್ ಇದ್ದರು.