World Arthritis Day: ಸಂಧಿವಾತ ಕಾಯಿಲೆಗೆ ಚಿಕಿತ್ಸೆಯೇ ಮದ್ದು! ತಜ್ಞವೈದ್ಯೆ ಡಾ. ಅರ್ಚನಾ ಎಂ. ಉಪ್ಪಿನ ಅಭಿಮತ

World Arthritis Day
Published on

ಪ್ರಸ್ತುತ ದಿನಗಳಲ್ಲಿ ಬಿಪಿ-ಶುಗರ್ ಸಮಸ್ಯೆಯಂತೆ ಅರ್ಥರೈಟಿಸ್ ( Arthritis ) , ರುಮಾಟಾಲಜಿ (ಸಂಧಿವಾತ/ ಕೀಲುವಾಯು) ಕಾಯಿಲೆ ಕೂಡ ಹೆಚ್ಚಿನ ಜನರಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಿವೆ. ಸಂಧಿವಾತ ( Arthritis ) ವಯಸ್ಸಾದವರಲ್ಲಿ ಮಾತ್ರ ಕಾಣಿಸುತ್ತದೆ ಎನ್ನುವ ತಪ್ಪು ಕಲ್ಪನೆ

 Dr. Archana M. Uppina
ಬಹುತೇಕರಲ್ಲಿದೆ. ಆದರೆ, ಈ ಸಮಸ್ಯೆ ಎಲ್ಲ ವಯೋಮಾನದವರಲ್ಲೂ ಪರಿಣಾಮ ಬೀರುತ್ತಿದ್ದು, 10 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನೂ ಕಾಡುತ್ತಿದೆ. ಇಂತಹ ಕಾಯಿಲೆ ಲಕ್ಷಣ, ಪರಿಹಾರ, ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಚಿಕಿತ್ಸಾ ಪದ್ಧತಿಗಳ ಕುರಿತು `ವಿಶ್ವ ಅರ್ಥರೈಟಿಸ್ ದಿನ ( World Arthritis Day )'ದ ಅಂಗವಾಗಿ ಬೆಳಗಾವಿ ಮಹಾನಗರದ `ಉಪ್ಪಿನ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಮತ್ತು ಅರ್ಥರೈಟಿಸ್ ಕೇಂದ್ರ' ಡಾ.ಅರ್ಚನಾ ಎಂ.ಉಪ್ಪಿನ (ಖನಗಾವಿ) ಅವರು ಕನ್ನಡದ ನಂ-1 ದಿನಪತ್ರಿಕೆ `ವಿಜಯವಾಣಿ' ಜತೆಗೆ ಮಾತನಾಡಿ ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.

ಆಧುನಿಕ ಜೀವನ ಶೈಲಿ, ಅನಿಯಮಿತ ಆಹಾರ ಪದ್ಧತಿ, ಒತ್ತಡದ ಜೀವನ ಕ್ರಮಗಳಿಂದಾಗಿ ಸಂಧಿವಾತ ಸಮಸ್ಯೆಯಿಂದ ಬಳಲುವರರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಮಧ್ಯ ವಯಸ್ಸಿನವರು, ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುವ ಸಂಧಿವಾತ ಕಾಯಿಲೆಗೆ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಅಪಾಯಕಾರಿಯಾಗಿ ಕಾಡುವ ಸಾಧ್ಯತೆಗಳು ಹೆಚ್ಚು. ಅರ್ಥರೈಟಿಸ್ ಕಾಯಿಲೆ ನಿರ್ಲಕ್ಷಿಸಿದಷ್ಟು ಅಪಾಯಕಾರಿಯಾಗಿರುವುದರಿಂದ ಸಾರ್ವಜನಿಕರಲ್ಲಿ ನಿರಂತರ ಜಾಗೃತಿಯ ಅಗತ್ಯತೆ ಇದೆ ಎನ್ನುತ್ತಾರೆ ಬೆಳಗಾವಿ ಮಹಾನಗರದ `ಉಪ್ಪಿನ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮತ್ತು ಅರ್ಥರೈಟಿಸ್ ಕೇಂದ್ರ'ದ ಡಾ.ಅರ್ಚನಾ ಎಂ. ಉಪ್ಪಿನ (ಖನಗಾವಿ).

ಸಂಧಿವಾತ ( Arthritis ) ವಿಧಗಳು: ಅಸ್ಥಿಸಂಧಿವಾತ, ರುಮಟಾಯ್ಡ್ ಸಂಧಿವಾತ ಮತ್ತು ಸೋರಿಯಾಟಿಕ ಸಂಧಿವಾತದ ಸೇರಿದಂತೆ ನೂರಕ್ಕು ಹೆಚ್ಚು ವಿಧಗಳಿವೆ. ಇವು ದೇಹದಲ್ಲಿ ನಾನಾ ರೀತಿಯ ಪರಿಣಾಮ ಉಂಟು ಮಾಡುತ್ತವೆ. ಸಂಧಿವಾತವು ಸ್ವಯಂ ನಿರೋಧಕ ಕಾಯಿಲೆ, ಮಂಡಿ ನೋವ್ವು ಆಸ್ತಿಸಂಧಿವಾತದ ರೋಗಿಗಳಲ್ಲಿ ಮೊಣಕಾಲು ನೋವು ಸಾಮಾನ್ಯ. ಕೆಲವೊಮ್ಮೆ ಶಸ್ತ್ರಚಿಕಿತ್ಸೆಯ ಅಗತ್ಯವಿರುವಷ್ಟು ತೀವ್ರವಾಗಿರುತ್ತದೆ. ಸಂಧಿಯ ಕಾರ್ಟಿಲೆಜ್ ದುರ್ಬಲವಾಗುವುದನ್ನು ಅಸ್ಥಿ ಸಂಧಿವಾತ ಎನ್ನಲಾಗುತ್ತದೆ ಇದು ಸಾಮಾನ್ಯವಾಗಿ ವಯಸ್ಸು ಆದವರಲ್ಲಿ ಕಂಡುಬರುತ್ತದೆ. ಇದು ಸಾಮಾನ್ಯವಾಗಿ ಮೊಣಕಾಲು, ಸೊಂಟ, ಕೈ ಮತ್ತು ಬೆನ್ನಿನ ಕೀಲುಗಳಲ್ಲಿ ಕಾಣಿಸುತ್ತದೆ. ಈ ಲಕ್ಷಣಗಳು ಕಂಡುಬಂದಲ್ಲಿ ರೊಮೊಟಾಲೋಜಿಸ್ಟ್ ವೈದ್ಯರನ್ನು ಸಂಪರ್ಕಿಸಿ.

Arthritis

ರೋಗ ಲಕ್ಷಣಗಳು: ಸಂಧಿವಾತ ಕಾಯಿಲೆಯಿಂದ ಬಳಲುವವರಲ್ಲಿ ನೋವು ತೀವ್ರತರವಾಗಿರುತ್ತದೆ. ಮೊಣಕೈ ಅಥವಾ ಬೆರಳಿನ ಕೀಲುಗಳನ್ನು ಮಡಚಿ ಮತ್ತು ತೆರೆಯುವಾಗ ಅನುಭವಿಸುವ ನೋವು ಸಹನೆ ಕಷ್ಟಕರವಾಗಿರುತ್ತದೆ. ಇದರಿಂದ ದಿನನಿತ್ಯದ ಕೆಲಸ-ಕಾರ್ಯ ಮಾಡಲೂ ಕಷ್ಟವಾಗುತ್ತದೆ. ಕೆಲವು ವಿಧದ ಸಂಧಿವಾತದಲ್ಲಿ (ಉರಿಯೂತ) ಕೀಲುಗಳ ಚರ್ಮ ಕೆಂಪಾಗುವುದನ್ನು ಕಾಣಬಹುದಾಗಿದೆ. ಸಂಧಿವಾತ ಹೆಚ್ಚಾದಂತೆ, ದೇಹ ಸ್ವಾಭಾವಿಕವಾಗಿ ನಿಷ್ಕಿöçಯಗೊಳ್ಳುತ್ತ ಸಾಗುತ್ತದೆ. ಶಕ್ತಿಯ ಕೊರತೆ ಜತೆಗೆ ಚಲನೆಯ ಸಾಮರ್ಥ್ಯ, ವ್ಯಾಪ್ತಿಯನ್ನೂ ಕಡಿಮೆಗೊಳಿಸುತ್ತ ಸಾಗುತ್ತದೆ. ಕ್ರಮೇಣ ಜ್ವರ ಬಾಧಿಸಲಾರಂಭಿಸುತ್ತದೆ. ಜ್ವರ ಸಂಧಿವಾತದ ಮುಂದುವರೆದ ಲಕ್ಷಣವಾಗಿದೆ.

ಮುನ್ನೆಚ್ಚರಿಕೆ ಬೇಕು: ಸಂಧಿವಾತ ಜಾಗೃತಿಗಾಗಿಯೇ ಪ್ರತಿವರ್ಷ ಅಕ್ಟೋಬರ್ 12 ರಂದು `ವಿಶ್ವ ಸಂಧಿವಾತ ದಿನ' ಆಚರಿಸಲಾಗುತ್ತಿದೆ. ಆದರೂ, ಜಾಗೃತಿಯ ಕೊರತೆ ಮತ್ತು ತಪ್ಪು ತಿಳುವಳಿಕೆಗಳಿಂದಾಗಿ ರೋಗಿಗಳು ಸಂಧಿವಾತ ನಿವಾರಣೆಗೆ ಅವೈಜ್ಞಾನಿಕ ಕ್ರಮ ಅನುಸರಿಸುತ್ತಿರುವುದು ಸಾಮಾನ್ಯವಾಗಿ ಕಂಡು ಬರುತ್ತಿದೆ. ಮಾರ್ಗದರ್ಶನದ ಕೊರತೆಯಿಂದ ಸಂಧಿವಾತಕ್ಕೆ ಬೇರೆ ರೋಗ ತಜ್ಞರ ಬಳಿ ಚಿಕಿತ್ಸೆ ಪಡೆಯುತ್ತಿರುವುದು ವಿಪರ್ಯಾಸ. ಅಲ್ಲದೆ, ಇತರೆ ವೈದ್ಯರು ಸಂಧಿವಾತ ಕಾಯಿಲೆ ಲಕ್ಷಣ ಕಂಡ ತಕ್ಷಣವೇ ಅರ್ಥರೈಟಿಸ್, ರುಮಾಟಾಲಜಿ ತಜ್ಞರ ಬಳಿ ಶಿಫಾರಸ್ಸು ಮಾಡ ಬೇಕು. ಈ ಕಾಯಿಲೆ ಗಂಭೀರ ಸ್ವರೂಪ ಪಡೆದುಕೊಂಡರೆ ಕಿಡ್ನಿ, ಹೃದಯ ಕಾಯಿಲೆ, ಚರ್ಮ ರೋಗ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ರೋಗಿಗಳು ತುತ್ತಾಗುತ್ತಾರೆ. ಹಾಗಾಗಿ, ಸಂಧಿವಾತ ಕಾಯಿಲೆ ಕುರಿತು ಸರ್ಕಾರ, ವೈದ್ಯರು, ವಿವಿಧ ಸಂಘ ಸಂಸ್ಥೆಗಳು ಆದ್ಯತೆ ಮೇರೆಗೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕಿದೆ ಎನ್ನುವ ಮಹತ್ವದ ಸಲಹೆ ಡಾ.ಅರ್ಚನಾ ಎಂ. ಉಪ್ಪಿನ ಅವರದ್ದು.

Arthritis

ಗೌಟ್ ದೇಹಕ್ಕೆ ಅಪಾಯಕಾರಿ

ದೇಹದಲ್ಲಿ ಯೂರಿಕ್ ಆ್ಯಸಿಡ್ ಪ್ರಮಾಣ ಹೆಚ್ಚಾದಾಗ ಗೌಟ್ ಮಾದರಿಯ ಸಂಧಿವಾತ ಕಾಣಿಸುತ್ತದೆ. ಇದೂ ಕೂಡ ಪುರುಷರಲ್ಲಿ ಸಾಮಾನ್ಯ. ಋತುಚಕ್ರ ನಿಂತ ಮಹಿಳೆಯರಲ್ಲೂ ಕಾಣಿಸಬಹುದು. ಪಾದದ ಮೂಳೆಯ ಸಂದುಗಳಲ್ಲಿ ನೋವು ಮತ್ತು ಊತ ಕಾಣಿಸಿಕೊಳ್ಳುತ್ತದೆ. ಇದಕ್ಕೂ ಸಂಧಿವಾತ ತಜ್ಞರ ಚಿಕಿತ್ಸೆಯೇ ಪರಿಹಾರ.

ಸ್ಪಾಂಡಿಲೋ ಆರ್ಥರೈಟಿಸ್‌ಗೆ ಚಿಕ್ಸಿತೆ

ಸ್ಪಾಂಡಿಲೋ ಆರ್ಥರೈಟಿಸ್ ಪುರುಷರಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ. ೪೫ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಕಾಣಿಸುವ ಬೆನ್ನು ಮತ್ತು ಕುತ್ತಿಗೆ ನೋವಿಗೆ ಸಕಾಲಕ್ಕೆ ಚಿಕಿತ್ಸೆ ಪಡೆಯದಿದ್ದರೆ, ಶಾಶ್ವತ ಸಮಸ್ಯೆಯಾಗಿ ಚಲನವಲನಗಳಿಗೆ ತೊಡಕು ಮಾಡಬಹುದು. ಸೊಂಟ, ಮಂಡಿ(ಹಿಪ್ಸ್), ಹಿಮ್ಮಡಿ ಹಾಗೂ ಕಣ್ಣು, ಚರ್ಮದ ಮೇಲೆ ಪರಿಣಾಮ ಬೀರಬಹುದು.

ಉಪ್ಪಿನ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮತ್ತು ಅರ್ಥರೈಟಿಸ್ ಕೇಂದ್ರದಲ್ಲಿ ಚಿಕಿತ್ಸೆ ಲಭ್ಯ

ಹತ್ತು ವರ್ಷಕ್ಕೂ ಅಧಿಕ ಅನುಭವ ಹೊಂದಿರುವ ಡಾ.ಅರ್ಚನಾ ಉಪ್ಪಿನ ಅವರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮತ್ತು ಅರ್ಥರೈಟಿಸ್ ಕೇಂದ್ರದಲ್ಲಿ ಮೂಳೆಗಳ ಸಂಧಿವಾತ-ಕೀಲು ನೋವು, ಗೌಟ್, ಅಸ್ಥಿ ಸಂಧಿವಾತ, ಸೋರಿಯಾಸಿಸ್, ಕೀಲುನೋವು, ಬೆನ್ನು ನೋವು, ಎಂಟರೆಪಿಥಿಕ್ ಅರ್ಥರೈಟಿಸ್, ರಿಆಕ್ಟಿವ್ ಅರ್ಥರೈಟಿಸ್, ವೈರಲ್ ಸಂಧಿವಾತ, ಮಾಂಸಖAಡ ನೋವು, ತಣ್ಣಗಿರುವ ಕೈ-ಕಾಲು ಬೆರಳು, ಗ್ಯಾಂಗ್ರಿನ್, ಸ್ಲಿರೋಡರ್ಮಾ, ಒಣಗಿದ ಕಣ್ಣು ಮತ್ತು ಬಾಯಿ, ನಿರಂತರ ಗರ್ಭಪಾತದಂಥ ರೋಗಗಳಿಗೆ ಚಿಕಿತ್ಸೆ ಲಭ್ಯವಿದೆ.

Uppin Hospital

ರುಮಟಾಯ್ಡ್ ಆರ್ಥರೈಟಿಸ್(ಆರ್‌ಎ) ಎಂದರೇನು?

ಮಧ್ಯ ವಯಸ್ಸಿನವರಲ್ಲಿ ಹೆಚ್ಚಾಗಿ ಕಾಣುವ ರುಮಟಾಯ್ಡ್ ಆರ್ಥರೈಟಿಸ್ ದೇಶದ ಜನಸಂಖ್ಯೆಯ ಶೇ.02ಕ್ಕಿಂತ ಹೆಚ್ಚು ಜನರ ಮೇಲೆ ಪರಿಣಾಮ ಬೀರುತ್ತಿದೆ. ಇದು ಸಾಮಾನ್ಯವಾಗಿ ಬೆರಳು ಮತ್ತು ಪಾದದ ಸಣ್ಣ ಕೀಲುಗಳ ಮೇಲೆ ಪರಿಣಾಮ ಬೀರಿ, ದೈನಂದಿನ ಕಾರ್ಯಗಳಿಗೆ ತೊಡಕು ಮಾಡುತ್ತದೆ. ಇದಕ್ಕೆ ಸಂಧಿವಾತ ತಜ್ಞರಿಂದಲೇ ಚಿಕಿತ್ಸೆ ಪಡೆಯುವುದು ಸೂಕ್ತ.

ಸಂಧಿವಾತ ( Arthritis ) ಕ್ಕೆ ಪ್ರಮುಖ ಕಾರಣ

ಇದು ಒಂದು ಸ್ವಯಂ ನಿರೋಧಕ ಕಾಯಿಲೆ. ಕೆಲವರಲ್ಲಿ ಆನುವಂಶಿಕ ಕಾರಣ ಮತ್ತು ದೇಹದ ಯೂರಿಕ ಆಮ್ಲದ ಕಾರ್ಯ ವೈಖರಿಯಲ್ಲಿ ಆಗು ಹೋಗುವ ಏರು-ಪೇರು ಕೂಡ ಸಂಧಿವಾತ ಕಾಣಿಸಿಕೊಳ್ಳಲು ಕಾರಣವಾಗುತ್ತದೆ ಎನ್ನುತ್ತಾರೆ ಡಾ.ಅರ್ಚನಾ ಉಪ್ಪಿನ. ಪ್ರತಿದಿನ ವ್ಯಾಯಾಮ, ವಾಕಿಂಗ್, ಯೋಗಾಭ್ಯಾಸದಂತಹ ಆರೋಗ್ಯಕಾರಿ ಅಭ್ಯಾಸಗಳನ್ನು ರೂಢಿಸಿಕೊಳ್ಳದಿರುವುದರ ಜತೆಗೆ ಅನಿಯಮಿತ ಆಹಾರ ಪದ್ಧತಿಯೇ ಸಂಧಿವಾತ ಸಮಸ್ಯೆ ಕಾಣಿಸಿಕೊಳ್ಳಲು ಒಂದು ಕಾರಣ ಆಗಬಹುದು.

ಡಾ.ಅರ್ಚನ ಉಪ್ಪಿನ್ ಸಂಧಿವಾತ ತಜ್ಞರರಿಂದ ಜನ ಸಾಮಾನ್ಯರಿಗೆ ಒಂದು ಸಲಹೆ

ಕಾಯಿಲೆ ಲಕ್ಷಣ ಕಂಡರೆ ಯಾವುದೆ ಭಯ ವಿಲ್ಲದೆ ಸಂಧಿವಾತ ತಜ್ಞರು ನೀಡಿರುವ ಔಷಧ ಉಪಚಾರ ನಿಯಮಿತವಾಗಿ ತೆಗೆದುಕೋಳ್ಳಬೇಕು. ನಿಯಮ್ಮಿತವಾಗಿ ವ್ಯಾಯಾಮ, ಹೆಚ್ಚಾಗಿ ಹಣ್ಣು ಹಂಪಳ, ತರಕಾರಿ, ಸಿರಿಧಾನ್ಯ ಇವುಗಳನ್ನು ಸೇವಿಸಬೇಕು.

Dr. Archana M. Uppina

ಕಾಯಿಲೆ ಹೀಗೆ ಗುರುತಿಸಿ

ಕೈ ಕಾಲುಗಳ ಸಣ್ಣ ಸಂದುಗಳ್ಳಲ್ಲಿ ನೋವು, ಊತ, ಗಡಸುತನ ಬೆಳಗಿನ ಹೊತ್ತು 30 ನಿಮಿಷಕ್ಕಿಂತ ಜಾಸ್ತಿ ಕಾಣಿಸುತ್ತಿದ್ದರೆ, ಇದು ಸಂಧಿವಾತದ ಲಕ್ಷಣಗಳು. ಕೆಲವುಸಲ ದೇಹದ ದೊಡ್ಡ ದೊಡ್ಡ ಸಂದುಗಳ ನೋವು ಕಾಣಿಸಬಹುದು. ಬೆನ್ನು ನೋವು, ಸುಸ್ತಾಗುವದು ಕೂಡಾ ಬರುತ್ತದೆ. ಸಣ್ಣ ಪ್ರಮಾಣದಲ್ಲಿ ಬಹಳ ದಿನಗಳವರೆಗೆ ಜ್ವರಕೂಡ ಬರಬಹುದು. ಸಾಮಾನ್ಯವಾಗಿ ಸಂಧಿವಾತದಲ್ಲಿ ಶಾಶ್ವತವಾಗಿ ನಿಷ್ಕಿöçÃಯಗೊಳಿಸುವ ಆಕಾರ ಬದಲಾವಣೆಯಾಗಬಹುದು.

ಸಂಧಿವಾತ ಎಲ್ಲ ವಯಸ್ಸಿನವರ ಮೇಲೂ ಪರಿಣಾಮ ಬೀರುತ್ತದೆ. ಇದೊಂದು ಗಂಭೀರ ಕಾಯಿಲೆಯಾಗಿದ್ದು, ನಿರ್ಲಕ್ಷಿಸಿದಷ್ಟು ಅಪಾಯಕಾರಿ. ಹಾಗಾಗಿ, ಸಂಧಿವಾತದ ಕಾಯಿಲೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯವಶ್ಯಕ. ವಿವಿಧ ಆರೋಗ್ಯ ವಿಮೆ ಯೋಜನೆಗಳಲ್ಲಿ ಈ ಕಾಯಿಲೆಗೆ ಚಿಕಿತ್ಸೆ ಪಡೆದುಕೊಳ್ಳಬಹುದು. ಉಪ್ಪಿನ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮತ್ತು ಅರ್ಥರೈಟಿಸ್ ಕೇಂದ್ರದಿಂದ ಉಚಿತ ಆರೋಗ್ಯ ಶಿಬಿರ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.

| ಡಾ. ಅರ್ಚನಾ ಎಂ. ಉಪ್ಪಿನ (ಖನಗಾವಿ), ಉಪ್ಪಿನ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಮತ್ತು ಅರ್ಥರೈಟಿಸ್ ಕೇಂದ್ರ, ಬೆಳಗಾವಿ

Arthritis

ಕಳೆದ ನಾಲ್ಕು ವರ್ಷದಿಂದ ಸಂಧಿವಾತ ಕಾಯಿಲೆಯಿಂದ ನಡೆದಾಡಲೂ ಸಾಧ್ಯವಾಗದ ಸ್ಥಿತಿಯಲ್ಲಿದ್ದೆ. ಅನೇಕ ವೈದ್ಯರ ಬಳಿ ಚಿಕಿತ್ಸೆ ಪಡೆದರೂ ಗುಣಮುಖವಾಗಿರಲಿಲ್ಲ. ಸಂಧಿವಾತ ತಜ್ಞೆ ಡಾ.ಅರ್ಚನಾ ಎಂ.ಉಪ್ಪಿನ ಅವರ ಬಳಿ ಪಡೆದ ಚಿಕಿತ್ಸೆಯಿಂದ ಗುಣಮುಖವಾಗಿದ್ದೇನೆ (ಉದ್ಯೋಗ ಮಾಡಲು ಸಾದ್ಯವಾಯಿತು).

| ನಮೃತಾ ಬೆಳಗಾವಿ

ಎಂಟು ವರ್ಷದಿಂದ ಸಂಧಿವಾತ ಕಾಯಿಲೆಯಿಂದ ಬಳಲುತ್ತಿದ್ದೆ. ಸಾಕಷು ಚಿಕಿತ್ಸೆ ಪಡೆದರು ಗುಣಮುಖವಾಗಿರಲಿಲ್ಲ. ಅಂತಿಮವಾಗಿ ಡಾ.ಅರ್ಚನಾ ಉಪ್ಪಿನ ಬಳಿ ಚಿಕಿತ್ಸೆ ಪಡೆದ ನಂತರ ಪರಿಹಾರ ಸಿಕ್ಕಿದೆ.

| ಅಮೂಲ್ ಬೆಳಗಾವಿಉಪ್ಪಿನ್ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಮತ್ತು ಅರ್ಥರೈಟಿಸ್ ಸೆಂಟರ್ ಮೊದಲನೆ ಹಂತ, ಸದಾಶಿವನಗರ ಬೆಳಗಾವಿ. ಮೊ : 7829371795, 7353340479 ಸಮಯ : ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 11.00 ಗಂಟೆಯಿAದ ರಾತ್ರಿ 07.00 ಗಂಟೆಯವರೆಗೆ

Arthritis
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net