ಹುಬ್ಬಳ್ಳಿಯಲ್ಲಿ ವಿಶ್ವ ಪ್ರಾಣಿಗಳ ದಿನಾಚರಣೆ

New Animal New
Published on

ಹುಬ್ಬಳ್ಳಿ : ಇಲ್ಲಿನ ರಂಗ ರೇಖಾ ಕಲಾ ಬಳಗ ಹಾಗು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಆಶ್ರಯದಲ್ಲಿ ವಿಶ್ವ ಪ್ರಾಣಿಗಳ ದಿನವನ್ನು ಭಾನುವಾರ ಆಚರಿಸಲಾಯಿತು.

ಉದ್ಘಾಟಿಸಿ ಮಾತನಾಡಿದ ಅರಣ್ಯ ಅಧಿಕಾರಿ ಎಸಿಎಫ್ ಖೇಮಚಂದ ರಾಠೋಡ, ಪ್ರಾಣಿ ಮತ್ತು ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಆರ್.ಎಂ. ಗೋಗೇರಿ, ರಂಗ ರೇಖಾ ಕಲಾ ಬಳಗ ವಿಭಿನ್ನವಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಹೆಮ್ಮೆಯ ಸಂಗತಿ. ಸಂಸ್ಕೃತಿಕ ಚಟುವಟಿಕೆಗಳನ್ನು ಇನ್ನೂ ಹೆಚ್ಚು ಆಯೋಜಿಸಲಿ ಎಂದು ಹಾರೈಸಿದರು.

ನಂತರ ಪ್ರಾಣಿ ರಕ್ಷಕರಿಗೆ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಮುಕ್ತಿ ಚಿತ್ರ ಪ್ರದರ್ಶನ ಆಯೊಜಿಸಲಾಗಿತ್ತು. ನಂತರ ತುಕಾರಾಮ ಕಠಾರೆ ಹಾಗೂ ಬದರಿನಾರಯಣ ಕೊರಲಳ್ಳಿ ಅವರು ರಂಗಗೀತೆಗಳನ್ನು ನೆರವೇರಿಸಿದರು. ಬ್ರಹ್ಮನ ಸೋಲು ಎಂಬ ನಾಟಕ ಪ್ರದರ್ಶಿಸಲಾಯಿತು.

ಯಲ್ಲಪ್ಪ ಜೊಡಳ್ಳಿ, ಸಂಗಮೇಶ ಚಕ್ರಸಾಲಿ, ಅಡಿಯಪ್ಪ ತಳವಾರ, ರಾಮಣ್ಣ ಕಾಳೆ, ರಾಹುಲ್ ಕೊಠಾರಿ, ರಫಿಕ ನದಾಫ,ರಾಕೇಶ ಉಳ್ಳಿಗೆರಿ, ಪ್ರಕಾಶ ಚಿಗರಿ, ಸೌರಭ ಕಮ್ಮಾರ, ಪ್ರಕಾಶ ಮಾಳಿ ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net