

ವಿಜಯಪುರ: ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಕಾಂಗ್ರೆಸ್ ಸೇವಾದಳ ವತಿಯಿಂದ ಹಮ್ಮಿಕೊಂಡಿರುವ ಡಾ. ನಾ.ಸು. ಹರ್ಡೇಕರ ಅವರ 136ನೇ ಜಯಂತಿ ಹಾಗೂ ಮಹಾತ್ಮಾ ಗಾಂಧೀಜಿ ಅವರು ಕಾಂಗ್ರೆಸ್ ಪಕ್ಷದ 100ನೇ ವರ್ಷದ ಅಧ್ಯಕ್ಷತೆ ವಹಿಸಿದ್ದರ ಸಮಾರಂಭದ ಆಚರಣೆ ಕುರಿತು ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ನಿಂಗಪ್ಪ ಸಂಗಾಪೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆಪಿಸಿಸಿ ಸೇವಾದಳ ಅಧ್ಯಕ್ಷ ರಾಮಚಂದ್ರ ಎಂ. ಆದೇಶದಂತೆ ಜಿಲ್ಲೆಯಲ್ಲಿ ರಾಜ್ಯ ಸೇವಾದಳ ಕಾಂಗ್ರೆಸ್ ವತಿಯಿಂದ ಒಂದು ದಿನದ ಕಾರ್ಯಾಗಾರ ನಡೆಸಲು ತೀರ್ಮಾನಿಸಲಾಗಿದೆ. ಈ ಕಾರ್ಯಾಗಾರದಲ್ಲಿ ಸುಮಾರು 300 ಜನರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ನಂತರ ನಡೆದ ಕಾರ್ಯಕ್ರಮದಲ್ಲಿ ವಿವಿಧ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ಪತ್ರಗಳನ್ನು ವಿತರಿಸಲಾಯಿತು.
ಸೇವಾ ದಳದ ಮುಖಂಡರಾದ ಮಲ್ಲಿಕಾರ್ಜುನ ಯಂಕಂಚಿ, ಕೆಪಿಸಿಸಿ ಸೇವಾದಳ ರಾಜ್ಯ ಸಂಟನಾ ಕಾರ್ಯದರ್ಶಿ ವರ್ಷಾ ಭೋವಿ, ಜಿಲ್ಲಾ ಸೇವಾದಳ ಮಹಿಳಾ ಅಧ್ಯಕ್ಷೆ ರಾಜೇಶ್ವರಿ ಚೋಳಕೆ, ಉಪಾಧ್ಯಕ್ಷ ಸಂತೋಷ ಬಾಲಗಾಂವಿ, ವಿಜಯಕುಮಾರ ಕಾಳೆ, ರವಿಗೌಡ ಪಾಟೀಲ, ರಮಜಾನ ಹೆಬ್ಬಾಳ, ಅಕ್ಷಯಕುಮಾರ ಸಿಂದಗಿ, ಮಲ್ಲು ದೊಡಮನಿ, ಪ್ರದಿಪ ಸೂರ್ಯವಂಶಿ, ಇಸಾಕ್ ಮುಲ್ಲಾ, ಮಲ್ಲಿಕಾರ್ಜುನ ಕೊಲಾರ, ವಿರೇಶ ದುಬಲಗುಂಡಿ, ಜುಬೇರ ಕೊಹಿನೂರ, ಲಕ್ಷ$್ಮಣ ಇಲಕಲ್, ಅಂಜಲಿ ಭೋವಿ, ಮಂಜುಳಾ ಗಾಯಕವಾಡ, ಬೀಬಿಜಾನ ಕಾಜಿ, ಚನಬಸಪ್ಪ ಕೊಟ್ಯಾಳ, ಪ್ರಕಾಶ ಗುಣದಾಳ, ಅಬ್ಬಾಸ ಪಿಂಜಾರ, ಆಸಿಫ್ ಅಮದಿ, ಅಣ್ಣಾರಾಯ ಬಬಲಾದಿ, ಶಮಸುದ್ದೀನ್ ಸೊರಟೂರ, ಪ್ರಶಾಂತ ಪೂಜಾರಿ, ಅನಿಲ ಸುರಗಿಹಳ್ಳಿ, ಚನ್ನಮ್ಮ ಚೌರ, ಶಕಿಲಾ ರೀಸಾಲ್ದಾರ ಮತ್ತಿತರರಿದ್ದರು.